ಚಿತ್ರದ ಹೆಸರೂ ಬದಲಾಗಿದೆ, ನಾಯಕಿಯೂ ಬದಲಾಗಿದ್ದಾಳೆ. ಬದಲಾಗದೇ ಉಳಿದಿರೋದು ನಾಯಕ, ನಿರ್ದೇಶಕ, ನಿರ್ಮಾಪಕರು ಮಾತ್ರ! ಹೌದು, ಇದು 'ತ್ರಿವಿಕ್ರಮ' ಎಂದು ಜರ್ನಿ ಆರಂಭಿಸಿದ ಓಂ ಪ್ರಕಾಶ್ ರಾವ್ ನಿರ್ದೇಶನದ ಹೊಸ ಚಿತ್ರದ ಟರ್ನಿಂಗ್ ಪಾಯಿಂಟ್.
ಆಕ್ಷನ್ ಚಿತ್ರಗಳ ಸರದಾರ ಓಂ ಪ್ರಕಾಶ್ ರಾವ್ ಅವರು ಗೋಪಿಚಂದ್ ದಾಂಡೇಲಿ ಎಂಬವರೊಂದಿಗೆ ಸೇರಿ ಸ್ವತಃ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕ. ಈ ಚಿತ್ರಕ್ಕಾಗಿ ತಮಿಳಿನ ಜನಪ್ರಿಯ ನಟಿ ತಾಪಸಿ ಪನ್ನು ಅವರನ್ನು ಕರೆ ತರಲಾಗುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ಈ ಸಂಬಂಧ ಮಾತುಕತೆಯನ್ನೂ ನಡೆಸಲಾಗಿತ್ತು.
ಆದರೆ ಅತ್ತ ತಾಪಸಿ ಮಾತ್ರ, ಕನ್ನಡ ಚಿತ್ರಗಳಲ್ಲಿ ನಟಿಸುವಷ್ಟು ನನಗೆ ಪುರುಸೊತ್ತಿಲ್ಲ ಎಂದು ಬಿಟ್ಟರು. ದಾರಿ ಕಾಣದ ಓಂ ಪ್ರಕಾಶ್ ರಾವ್ ಗ್ಲಾಮರ್ ಬೊಂಬೆ ರಾಗಿಣಿಗೆ ಜೈ ಎಂದಿದ್ದಾರೆ. ಚಿತ್ರಕ್ಕೆ ಅವರೇ ನಾಯಕಿಯಂತೆ.

ನಾಯಕಿಯೇನೋ ಬದಲಾದ್ಳು ಅಂದ್ರೆ, ಚಿತ್ರದ ಹೆಸರೂ ಬದಲಾಗಿದೆ. ತ್ರಿವಿಕ್ರಮ ಎಂದು ಹೆಸರಿಸಲಾಗಿದ್ದ ಚಿತ್ರದ ಹೆಸರೀಗ ತ್ರಿಮೂರ್ತಿ ಆಗಿದೆ. ಇದಕ್ಕೇನು ಕಾರಣ ಅನ್ನೋದು ಗೊತ್ತಾಗಿಲ್ಲ.
ಇನ್ನು ರಾಗಿಣಿ ನಿರ್ದೇಶಕ ಓಂ ಪ್ರಕಾಶ್ ರಾವ್ (ಶಿವ) ಅವರಿಗೂ ಹೊಸತಲ್ಲ, ನಾಯಕ ಉಪ್ಪಿಗೂ (ಆರಕ್ಷಕ) ಹೊಸತಲ್ಲ. ಇಬ್ಬರ ಜತೆಗೂ ಒಂದೊಂದು ಚಿತ್ರ ಮಾಡಿದ್ದಾರೆ ರಾಗಿಣಿ.
ನಾನು ಈಗಷ್ಟೇ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕನಾಗಿರುವ 'ಶಿವ' ಚಿತ್ರವನ್ನು ರಾಗಿಣಿ ಜತೆ ಮುಗಿಸಿದ್ದೇನೆ. ಉತ್ತಮ ನಟಿಯಾಕೆ. ಹಾಗಾಗಿ ಮತ್ತೆ ಆಕೆಯ ಜತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಪಾತ್ರದ ಬಗ್ಗೆ ರಾಗಿಣಿ ಆಸಕ್ತಿ ತೋರಿಸಿದ್ದಾರೆ. ಮಾತುಕತೆ ನಡೆಯುತ್ತಿದೆ, ಒಂದೆರಡು ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ನಾವೀಗ ಶೀರ್ಷಿಕೆಯನ್ನೂ ಬದಲಿಸಿದ್ದೇವೆ. ಚಿತ್ರಕ್ಕಿಟ್ಟಿರುವ ಹೊಸ ಹೆಸರು ತ್ರಿಮೂರ್ತಿ ಎಂದು ಓಂ ಪ್ರಕಾಶ್ ರಾವ್ ಹೇಳಿಕೊಂಡಿದ್ದಾರೆ.
ಅತ್ತ ಲೇಡಿ ಕಾಪ್ ಆಗಿ ಮಿಂಚುತ್ತಿರುವ ರಾಗಿಣಿ 'ರಾಗಿಣಿ ಐಪಿಎಸ್' ಮುಗಿಸಿ, ಉಪ್ಪಿ ಜತೆ ಎರಡನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. 'ತ್ರಿಮೂರ್ತಿ'ಯಲ್ಲಿ ತಾನು ನಟಿಸುತ್ತಿರೋದು ಹೌದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸಹಿ ಹಾಕಿಲ್ವಂತೆ, ಇನ್ನೂ ಹಲವು ಚಿತ್ರಗಳು ಕೈಯಲ್ಲಿವೆ. ಸದ್ಯ 'ರಾಗಿಣಿ ಐಪಿಎಸ್' ಮುಗಿಯಲಿ ಎಂದು ಕಾಯುತ್ತಿದ್ದೇನೆ ಎಂದಿದ್ದಾರೆ.
ಉಪ್ಪಿ ಕೂಡ 'ಟೋಪಿವಾಲಾ', 'ಕಲ್ಪನಾ'ದಲ್ಲಿ ಬ್ಯುಸಿ. ಒಪ್ಪಿಕೊಂಡಿರುವ ಆ ಚಿತ್ರಗಳು ಮುಗಿಯುತ್ತಿದ್ದಂತೆ 'ತ್ರಿಮೂರ್ತಿ' ಶುರು. ಇನ್ನು ಕೆಲವೇ ದಿನಗಳಲ್ಲಿ ಮುಹೂರ್ತ ನಡೆಯಲಿದೆಯಂತೆ.

No comments:
Post a Comment