'ನಾನು ಮತ್ತು ಸೌಂದರ್ಯ' ಗೆಟ್ ಟುಗೆದರ್‌ಗೆ ಹೋಗಿದ್ದ ರಿಯಲ್ ಸ್ಟಾರ್ ಉಪೇಂದ್ರ, ನಿಮ್ಮ ಮಗಳಿಗೆ ನೀವೇ 'ಗಾಡ್‌ಮದರ್' ಎಂದು ಜಯಮಾಲಾರಲ್ಲಿ ಹೇಳಿದ್ದರು. ಈಗ ನೋಡಿದ್ರೆ, ಜೂನಿಯರ್ ಜಯಮಾಲಾಗೆ ಸ್ವತಃ ಉಪ್ಪಿಯೇ 'ಗಾಡ್‌ಫಾದರ್' ಆಗಿರುವಂತಿದೆ. ನಾನು ಚೆನ್ನಾಗಿ ನಟಿಸಿದ್ದರೆ ಅದಕ್ಕೆ ಕಾರಣ ಉಪೇಂದ್ರ ಎಂದು ಸೌಂದರ್ಯ ಸಾರಿ ಬಿಟ್ಟಿದ್ದಾರೆ.
ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ 'ಗಾಡ್‌ಫಾದರ್'ನಲ್ಲಿ ಸೌಂದರ್ಯ ನಾಯಕಿ. ಚಿತ್ರದಲ್ಲಿನ ಅವರ ಅಭಿನಯದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ತೂಕ ಇನ್ನೊಂದಷ್ಟು ಕಡಿಮೆ ಮಾಡಿಕೊಳ್ಳಬೇಕು ಅನ್ನೋದನ್ನು ಬಿಟ್ಟರೆ ಬೇರೆ ಯಾವುದೇ ಅಪಸ್ವರಗಳು ಕೇಳಿ ಬಂದಿರಲಿಲ್ಲ. ಪ್ರೇಕ್ಷಕರೂ ಜೂನಿಯರ್ ಜಯಮಾಲಾರ ವರಸೆ ಕಂಡು ಖುಷಿಯಾಗಿದ್ದರು.
ಮೊದಲ ಚಿತ್ರದಲ್ಲೇ ಇಷ್ಟೊಂದು ಮೆಚ್ಚುಗೆ ಪಡೆದುಕೊಂಡಿರುವ ಸೌಂದರ್ಯ ಖುಷಿಗಂತೂ ಪಾರವೇ ಇಲ್ಲದಂತಾಗಿದೆ. ಇದಕ್ಕೆ ಏನಿದ್ದರೂ ಕಾರಣ, ನನ್ನ ಚಿತ್ರದ ನಾಯಕ ಉಪೇಂದ್ರ. ಅವರಿಂದಾಗಿ ನಾನು ಇಷ್ಟೊಂದು ಚೆನ್ನಾಗಿ ನಟಿಸುವಂತಾಯಿತು ಎಂದು ಹೇಳಿಕೊಂಡಿದ್ದಾರೆ.
ಉಪೇಂದ್ರ ಸಾರ್ ಜತೆ ಕೆಲಸ ಮಾಡೋದೇ ಖುಷಿ. ಈ ಆಫರ್ ಕೊಟ್ಟ ಅವರಿಗೆ ತುಂಬಾ ಥ್ಯಾಂಕ್ಸ್. ಅವರನ್ನು ಅದಕ್ಕೂ ಮುಂಚೆ ಸಾಕಷ್ಟು ಸಲ ಭೇಟಿ ಮಾಡಿದ್ದರೂ, ಶೂಟಿಂಗ್‌ಗೆ ಹೋದಾಗ ನರ್ವಸ್ ಆಗಿದ್ದೆ. ಆದರೆ ಅವರು ನನ್ನಲ್ಲಿ ವಿಶ್ವಾಸ ತುಂಬಿದರು. ಮೊದಲ ಶಾಟ್‌ನಲ್ಲೇ ಚೆನ್ನಾಗಿ ನಟಿಸಿದ್ದೇನೆ ಎಂದು ಸರ್ಟಿಫಿಕೇಟ್ ಕೊಟ್ಟರು. ಅವರಿಲ್ಲದೇ ಇದ್ದಿದ್ದರೆ, ಅಷ್ಟೊಂದು ಚೆನ್ನಾಗಿ ನಟಿಸುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
'ಗಾಡ್‌ಫಾದರ್' ಹಿಟ್ ಹಾದಿಯಲ್ಲಿದೆ. ಈ ನಡುವೆ ಬೇರೆ ಆಫರುಗಳೇನಾದರೂ ಬರುತ್ತಿವೆಯೇ ಎಂದು ಕೇಳಿದರೆ, ಗೊತ್ತಿಲ್ಲ ಎಂಬ ಉತ್ತರ ಸೌಂದರ್ಯಾರಿಂದ ಬಂದಿದೆ. ಅಂದರೆ ಅವೆಲ್ಲವನ್ನೂ ಸೀನಿಯರ್ ಜಯಮಾಲಾ ನೋಡಿಕೊಳ್ಳುತ್ತಾರಂತೆ.
"ನನಗೇನೂ ಗೊತ್ತಿಲ್ಲ, ಆಫರುಗಳು ಬಂದಿರುವಂತಿದೆ. ಅಮ್ಮ ನನ್ನಲ್ಲಿ ಹೇಳಿಲ್ಲ. ಅವರಿಗೆ ಇಷ್ಟವಾದರೆ ನನಗೆ ಹೇಳುತ್ತಾರೆ. ನನ್ನ ಮೊದಲ ಚಿತ್ರ ತೆರೆಗೆ ಈಗಷ್ಟೇ ಬಂದಿರುವುದರಿಂದ, ಅದರಲ್ಲಿ ನನ್ನ ನಟನೆ ನೋಡಿಕೊಂಡು ಮುಂದಿನ ಆಫರುಗಳು ಬರಬಹುದು. ನನ್ನ ಸಾಮರ್ಥ್ಯವನ್ನು ಈ ಚಿತ್ರದಲ್ಲೇ ಅಳೆಯುತ್ತಾರೆ. ಅಮ್ಮ ಹೇಳಿದ ಚಿತ್ರದಲ್ಲಿ ನಾನು ನಟಿಸುತ್ತೇನೆ" ಎಂದರು.
ಅಂದರೆ, ಸೌಂದರ್ಯ ಸದಾ ಅಮ್ಮನ ನೆರಳಿನಲ್ಲೇ ಇರುತ್ತಾರಾ? ಅಮ್ಮ ಹಾಕಿದ ಗೆರೆಯನ್ನು ದಾಟೋದಿಲ್ವೇ? ಸ್ವಂತಿಕೆಗೆ ಅವಕಾಶವೇ ಇಲ್ಲವೇ? ಹೀಗೆಲ್ಲ ಪ್ರಶ್ನೆ ಕೇಳೋ ಹಾಗಿಲ್ಲ. ಯಾಕೆಂದರೆ, ಸೌಂದರ್ಯ ಈಗ ತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆಕೆಯನ್ನು ಸೀನಿಯರ್ ಜಯಮಾಲಾ ಕರೆಯುವುದೇ 'ನನ್ನ ಕಂದ' ಎಂದು. ನನ್ನ ಕಂದನಿಗೆ ಏನೂ ಗೊತ್ತಿಲ್ಲ ಎಂದು ಮಾತು ಮಾತಿಗೆ ಹೇಳುತ್ತಾರೆ. ಹೀಗಿರುವಾಗ ಬಣ್ಣದ ಲೋಕದ ಕರಾಮತ್ತುಗಳ ಪಾಠ ಕಲಿಸದೆ, ಆಕೆಯನ್ನು ಸ್ವತಂತ್ರವಾಗಿ ಹಾರಲು ಸೀನಿಯರ್ ಬಿಡಲಾರರು.
ಆದರೂ ಸೌಂದರ್ಯಾಗೆ ತಾಯಿಯ ಹೆಸರಿನಲ್ಲೇ ಗುರುತಿಸಿಕೊಳ್ಳುವುದು ಅಷ್ಟೊಂದು ಇಷ್ಟವಿದ್ದಂತಿಲ್ಲ. ತಾಯಿ ರೋಲ್ ಮಾಡೆಲ್ ಹೌದು, ಆದರೆ ನಾನು ನನ್ನ ಸಾಮರ್ಥ್ಯದಿಂದಲೇ ಗುರುತಿಸಿಕೊಳ್ಳುತ್ತೇನೆ ಎನ್ನುತ್ತಾರೆ.

No comments:
Post a Comment