Thursday, 15 March 2012

ಉಪ್ಪಿಯದ್ದೇ ಕಥೆ, ಆದ್ರೆ 'ಟೋಪಿವಾಲ' ನಿರ್ದೇಶಕ ರೇಡಿಯೋ ಜಾಕಿ ಶ್ರೀನಿವಾಸ್!


ಸಾಮಾನ್ಯವಾಗಿ ರಿಯಲ್ ಸ್ಟಾರ್ ಉಪೇಂದ್ರ ತನ್ನ ಕಥೆಯನ್ನು ಬೇರೆಯವರಿಗೆ ಕೊಡೋದು ತುಂಬಾ ಅಪರೂಪ. ಅಪವಾದವೆಂಬಂತೆ ಈಗ 'ಟೋಪಿವಾಲ' ಚಿತ್ರದಲ್ಲಿ ರೇಡಿಯೋ ಜಾಕಿ ಶ್ರೀನಿಗೆ ಕಥೆ ಬರೆದು ಕೊಟ್ಟಿದ್ದಾರೆ. ಜತೆಗೆ ಚಿತ್ರಕಥೆ, ಸಂಭಾಷಣೆಯನ್ನೂ ಕೊಟ್ಟಿದ್ದಾರೆ. ನಿರ್ದೇಶಕರಿಗೆ ಉಪ್ಪಿ ಉಳಿಸಿರುವ ಕೆಲಸ ಕೇವಲ ನಿರ್ದೇಶನ ಮಾತ್ರ!

ಹೀಗೆ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಉಪ್ಪಿ ಕೆಲಸ ಮಾಡಿರುವ 'ಟೋಪಿವಾಲ'ದ ಚಿತ್ರೀಕರಣ ಶುರುವಾಗಿದೆ. ಕೆಲವು ದಿನಗಳ ಹಿಂದಷ್ಟೇ ಚಾಮರಾಜ ನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಮುಹೂರ್ತ ಮುಗಿಸಿದ ಚಿತ್ರತಂಡ ನೇರವಾಗಿ ರಾಮನಗರಕ್ಕೆ ಹೊರಟಿದೆ. ಅಲ್ಲಿ ಒಂದು ವಾರಗಳ ಕಾಲ ಶೂಟಿಂಗ್. ನಂತರ ರಾಜ್ಯದ ವಿವಿಧೆಡೆ ಚಿತ್ರೀಕರಣ.

ಜಾಕಿ, ವಿಷ್ಣುವರ್ಧನ, ರೋಮಿಯೋ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿರುವ ಭಾವನಾ 'ಟೋಪಿವಾಲ'ದಲ್ಲಿ ಉಪ್ಪಿಗೆ ನಾಯಕಿ. ಇಲ್ಲಿ ಉಪ್ಪಿ ಮೊದಲ ಬಾರಿ ಸಿಕ್ಸ್ ಪ್ಯಾಕ್‌ಗೆ ಮೊರೆ ಹೋಗಿರುವುದು ವಿಶೇಷ. ಅದಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ದೇಹವನ್ನು ಹುರಿಗೊಳಿಸಿರುವ ಉಪ್ಪಿ, ಚಿತ್ರದಲ್ಲಿ ಸಖತ್ ಮಿಂಚಲಿದ್ದಾರಂತೆ.

ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ. ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಸಂಗೀತ ಹರಿಕೃಷ್ಣ ಅವರದ್ದು. ರವಿಶಂಕರ್, ರಂಗಾಯಣ ರಘು ಮುಂತಾದ ಸಹನಟರೂ ಇಲ್ಲಿದ್ದಾರೆ. ಈಗಷ್ಟೇ ನಾಯಕಿ ಜತೆ 'ಟೋಪಿವಾಲ' ಟೀಮ್ ಸೇರಿಕೊಂಡಿರುವ ಉಪ್ಪಿ ಇನ್ನೊಂದು ತಿಂಗಳ ಕಾಲ ಬ್ಯುಸಿ.

ಸ್ವಂತ ಬ್ಯಾನರ್ ಹೆಸರು...
ಈ ನಡುವೆ ಉಪೇಂದ್ರ ತನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕುವ ಯೋಚನೆಯಲ್ಲಿದ್ದಾರೆ. ಅದಕ್ಕೆ ಹೆಸರೇನು ಎಂದು ನೀವೇ ಹೇಳಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ನನ್ನ ಹೋಮ್ ಬ್ಯಾನರಿಗೊಂದು ಹೆಸರು ಬೇಕು, ಪ್ಲೀಸ್ ಕೊಡುತ್ತೀರಾ ಎಂದು ಟ್ವಿಟ್ಟರ್‌ನಲ್ಲಿ ಉಪ್ಪಿ ಮನವಿ ಮಾಡಿದ್ದಾರೆ. ಕೆಲವರು ಹೆಸರನ್ನೂ ಕೊಟ್ಟಿದ್ದಾರೆ. ಇದಕ್ಕಾಗಿ ಧನ್ಯವಾದ ಕೂಡ ಉಪ್ಪಿ ಕಡೆಯಿಂದ ಬಂದಿದೆ. 'ಅಭಿಮಾನಿಗಳು ನಿರ್ದೇಶಕ-ನಿರ್ಮಾಪಕರಿಗಿಂತ ಯಾವಾಗಲೂ ಬುದ್ಧಿವಂತರು ಅಂತ ಪ್ರೂವ್ ಮಾಡದ್ದೀರಾ..' ಎಂದೂ ಮೆಸೇಜ್ ಮಾಡಿದ್ದಾರೆ.

ಉಪ್ಪಿ ಹೀಗೆ ಹೋಮ್ ಬ್ಯಾನರ್ ಮಾಡಲು ಹೊರಟಿರುವುದು ತನ್ನ ಪತ್ನಿ ಪ್ರಿಯಾಂಕಾ ನಿರ್ದೇಶಕಿಯಾಗುವ ಚಿತ್ರಕ್ಕೆ ಎಂದು 

No comments:

Post a Comment