Thursday, 15 March 2012

ನೀನೇ ಬೇಕೆಂದ ಉಪ್ಪಿ, ರಿಷಿಕಾಗೆ ಖುಷಿಯೋ ಖುಷಿ


ಬಿಗ್ ಬಾಬು ಪುತ್ರಿ ರಿಷಿಕಾ ಅದೃಷ್ಟ ಖುಲಾಯಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಜತೆ ಹಾಡೊಂದಕ್ಕೆ ಹೆಜ್ಜೆ ಹಾಕುವ ಅವಕಾಶ ಅವರಿಗೆ ಸಿಕ್ಕಿದೆ. ಅದೂ ಸ್ವತಃ ಉಪ್ಪಿ ಶಿಫಾರಸಿನ ಮೇರೆಗೆ! ಹೌದು, ರಿಷಿಕಾಳೇ ಬೇಕು ಅಂತ ಉಪ್ಪಿ ಹೇಳಿದ್ರಂತೆ. ಇದನ್ನು ಕಿವಿಗೆ ಹಾಕಿಕೊಂಡಿರುವ ರಿಷಿಕಾಗೀಗ ಖುಷಿಯೋ ಖುಷಿ!

ತಮಿಳಿನ ಶ್ರೇಯಾ ಕುಣಿಯಬೇಕಾಗಿದ್ದ ಹಾಡಿನಲ್ಲಿ ರಿಷಿಕಾ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಚಿತ್ರಾನ್ನದಲ್ಲಿ ಮರುಜನ್ಮ ಪಡೆದ ಸುಮನ್ ರಂಗನಾಥ್ ಇನ್ನೊಮ್ಮೆ ಉಪ್ಪಿ ಜತೆ ಕಾಣಿಸಿಕೊಂಡಿರುವುದು ವಿಶೇಷ. ಇವರ ಜತೆ ರಂಭೆ, ಊರ್ವಶಿ, ಮೇನಕೆಯರ ಸಾಲಿಗೆ ಸೇರಿರುವ ಇನ್ನೊಬ್ಬಾಕೆ ರಮಣಿತೋ ಚೌಧರಿ. ಪಕ್ಕಾ ಐಟಂ ಸಾಂಗ್. ಈ ವರ್ಷದ ಹಿಟ್ ಐಟಂ ಆಗುವ ಸಂಭಾವ್ಯ ಹಾಡು. ಅದೂ 3ಡಿ ಅಂದರೆ ಕೇಳಬೇಕೇ?

ಇದು ಉಪೇಂದ್ರ-ಲಕ್ಕಿ ಸ್ಟಾರ್ ರಮ್ಯಾ ಪ್ರಧಾನ ಪಾತ್ರಗಳಲ್ಲಿರುವ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ ಸುದ್ದಿ. ಇಲ್ಲಿ ಅಂಬರೀಷ್ ಯಮ ಧರ್ಮರಾಜನ ಪಾತ್ರ ಮಾಡುತ್ತಿರುವುದು ಗೊತ್ತೇ ಇದೆ. ಅದಕ್ಕೀಗ ಮೂವರು ಹಾಟ್ ಬೆಡಗಿಯರ ಎಂಟ್ರಿಯಾಗಿದೆ. ರಿಷಿಕಾ ಸಿಂಗ್, ಸುಮನ್ ರಂಗನಾಥ್ ಮತ್ತು ರಮಣಿತೋ ಚೌಧರಿ ರಂಭೆ-ಊರ್ವಶಿ-ಮೇನಕೆಯರಾಗಿದ್ದಾರೆ.

ಮುನಿರತ್ನ ಅಂದುಕೊಂಡಿದ್ದು ನಿಜವಾಗಿರುತ್ತಿದ್ದರೆ ಈ ಹಾಡಲ್ಲಿ ಶ್ರೇಯಾ ಕಾಣಿಸಿಕೊಳ್ಳಬೇಕಿತ್ತು. ಆದರೆ ಆಕೆ ಪುರುಸೊತ್ತಿಲ್ಲ ಎಂಬ ಕಾರಣವನ್ನು ಮುಂದಿಟ್ಟಳು. ಇತ್ತ ಚಿತ್ರತಂಡಕ್ಕೂ ಕಾಯುವುದು ಸಾಧ್ಯವಿಲ್ಲ. ಹಾಗಾಗಿ ಆ ಜಾಗಕ್ಕೀಗ ಕನ್ನಡದ ಬೆಡಗಿಯರು ಬಂದಿದ್ದಾರೆ.

ರಿಷಿಕಾ ಸಿಂಗ್‌ರನ್ನು ಉಪ್ಪಿ ಈ ಪರಿಯಾಗಿ ಮೆಚ್ಚಿಕೊಳ್ಳಲು ಕಾರಣ, 'ಕಳ್ಳ ಮಳ್ಳ ಸುಳ್ಳ'. ಆ ಚಿತ್ರದಲ್ಲಿ ರಿಷಿಕಾ ಬೇಕಾಬಿಟ್ಟಿಯಾಗಿ ಕುಣಿದಿದ್ದರು. ಹಾಗಾಗಿ ಈ ಹಾಡಿಗೆ ರಿಷಿಕಾರೇ ಇದ್ರೆ ಚೆನ್ನಾಗಿತ್ತು ಅಂತ ಉಪ್ಪಿ ಹೇಳಿದ್ರಂತೆ. ಇದನ್ನು ಬಹಿರಂಗ ಪಡಿಸಿರೋದು ಸ್ವತಃ ರಿಷಿಕಾ. ಬರೀ ಒಂದು ಹಾಡಷ್ಟೇ ಎಂಬ ಬೇಸರವಿಲ್ಲ. ಉಪ್ಪಿ ಜತೆ ಕಾಣಿಸಿಕೊಳ್ಳುವ ಅವಕಾಶ ಸಿಕ್ತಲ್ಲ ಎಂಬ ಖುಷಿಯೇ ಜಾಸ್ತಿ. ಮುಂದೆ ನಾಯಕಿಯಾಗಿ ಅವರ ಜತೆ ನಟಿಸುತ್ತೇನೆ ಅಂತಾರವರು.

ಅಂದ ಹಾಗೆ ಈ ಹಾಡನ್ನು ಐಟಂ ಸಾಂಗ್ ಎಂದು ಕರೆಯಲು ಎಂದಿನಂತೆ ಈ ಬಾರಿಯೂ ರಿಷಿಕಾ ನಿರಾಕರಿಸಿದ್ದಾರೆ. ಇದು ಐಟಂ ಹಾಡಲ್ಲ, ಸಾಂದರ್ಭಿಕ ಹಾಡು ಎಂದು ಹೊಸ ಹೆಸರು ನೀಡಲು ಯತ್ನಿಸಿದ್ದಾರೆ. ಇದಕ್ಕೆ ಅತ್ತ ರಮಣಿತು ಚೌಧರಿ ಕೂಡ ದನಿ ಸೇರಿಸಿದ್ದಾರೆ. ಆದರೆ ಸುಮನ್ ರಂಗನಾಥ್ ಮಾತ್ರ ಇದಕ್ಕೆ ಅಪವಾದ. ಇನ್ನೊಂದು ಐಟಂ ಸಾಂಗ್ ಚಿತ್ರಾನ್ನ ಇದಾಗಬಹುದು 

No comments:

Post a Comment