'ಕಠಾರಿ ವೀರ ಸುರಸುಂದರಾಂಗಿ' ವಿವಾದಕ್ಕೆ ಕಾರಣವಾಗಿರುವ ಅಂಶ ಏನೆಂದೇ ನನಗೆ ಗೊತ್ತಿಲ್ಲ, ಹಾಗಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಹೇಳಿದ್ದ ರಿಯಲ್ ಸ್ಟಾರ್ ಉಪೇಂದ್ರ ಸೋಮವಾರ ಕ್ಷಮೆ ಯಾಚಿಸಿರುವ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ತಪ್ಪು ಕಾಣಿಕೆಯನ್ನೂ ಹಾಕಿದ್ದಾರೆ!
ಎರಡು ದಿನಗಳ ಹಿಂದಷ್ಟೇ ಉಪ್ಪಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಮಾಧ್ಯಮಗಳ ಕರೆಗೂ ಸ್ಪಂದಿಸುತ್ತಿರಲಿಲ್ಲ. ಆದರೆ ಯಾವಾಗ ಸಕಲೇಶಪುರದಲ್ಲಿ ತನ್ನ ಆಪ್ತ ಸಹಾಯಕನ ಮದುವೆಗೆ ಹೋಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಘೇರಾವ್ ಹಾಕಿಸಿಕೊಂಡರೋ, ಆಗ ವಿವಾದದ ಬಿಸಿ ತಟ್ಟಿತ್ತು. ಅಲ್ಲಿಂದ ಹೇಗೋ ತಪ್ಪಿಸಿಕೊಂಡವರು ಸೋಮವಾರ ನಿರ್ಮಾಪಕ ಮುನಿರತ್ನ ಜತೆ ಸೀದಾ ಉಡುಪಿಗೆ ಹೋಗಿ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿದರು.
ಹಿಂದೂ ಸಂಘಟನೆಗಳ ಮುಖಂಡರು ಮತ್ತು ಶಿರೂರು ಶ್ರೀಗಳ ಜತೆ ಮಾತುಕತೆ ನಡೆಸಿದ ನಂತರ, ಉಪೇಂದ್ರ ಮತ್ತು ಮುನಿರತ್ನ ಬಿಗಿ ಪೊಲೀಸ್ ಭದ್ರತೆಯಲ್ಲಿ ಶ್ರೀಕೃಷ್ಣ ಮಠಕ್ಕೆ ತೆರಳಿದರು. ಅಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು, ನಡೆದಿರುವ ತಪ್ಪಿಗೆ ಕ್ಷಮೆಯಿರಲಿ ಎಂದು 'ತಪ್ಪು ಕಾಣಿಕೆ' ಹಾಕಿದರು.

ತಪ್ಪಾಯ್ತು, ಕ್ಷಮಿಸಿ....
ಶ್ರೀಕೃಷ್ಣ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಪೇಂದ್ರ, 'ಕಠಾರಿ ವೀರ ಸುರಸುಂದರಾಂಗಿ' ಸಿನಿಮಾದಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತವಾಗಿದೆ. ಅದಕ್ಕೆ ನಾವು ಇನ್ನು ಕೆಲವೇ ದಿನಗಳಲ್ಲಿ ತಿದ್ದುಪಡಿ ಮಾಡುತ್ತೇವೆ. ಆಗಿರುವ ಪ್ರಮಾದಕ್ಕಾಗಿ ನಾವು ಶಿರೂರು ಸ್ವಾಮೀಜಿಯವರ ನೇತೃತ್ವದಲ್ಲಿ ತಪ್ಪು ಕಾಣಿಕೆಯ ವಿಧಿ ನೆರವೇರಿಸಿದ್ದೇವೆ. ಜತೆಗೆ ಇದಕ್ಕೆ ನಾನು ಎಲ್ಲರ ಕ್ಷಮೆ ಕೇಳುತ್ತಿದ್ದೇನೆ.
ಶ್ರೀಕೃಷ್ಣ ಮಠ ನನ್ನ ತವರು ನೆಲವೇ ಆಗಿರುವುದರಿಂದ, ಹೊಸತಲ್ಲ. ಶಿರೂರು ಸ್ವಾಮೀಜಿಯವರಂತೂ ನಮಗೆ ತುಂಬಾ ಆಪ್ತರು. ಅವರ ಕೊನೆಯ ಪರ್ಯಾಯದ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೆ. ಈಗ ವಿವಾದದ ಕಾರಣದಿಂದ ಅವರ ಆಶೀರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿದೆ ಎಂದರು ಉಪೇಂದ್ರ.

ಸ್ವಾಮೀಜಿ ಆಶೀರ್ವಾದ...
ಇದೇ ಸಂದರ್ಭದಲ್ಲಿ ಮಾತನಾಡಿದ ಶಿರೂರು ಶ್ರೀಗಳು, ಎಲ್ಲವೂ ಸುಖಾಂತ್ಯವಾಗಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದಾರೆ. ಅದು ಸಿದ್ಧವಾದ ನಂತರ ಸ್ವತಃ ನಾನೇ ಸಿನಿಮಾ ನೋಡುತ್ತೇನೆ. ಇನ್ನು ಸಿನಿಮಾ, ಅದರ ನಿರ್ಮಾಪಕರು, ತಂತ್ರಜ್ಞರೆಲ್ಲರಿಗೂ ಶುಭವಾಗಲಿ. ಉತ್ತಮ ಚಿತ್ರಗಳು ಇವರಿಂದ ಹೊರ ಬರುವಂತಾಗಲಿ ಎಂದು ಹರಸಿದರು.
No comments:
Post a Comment