ಸದ್ಯ ಬಹುನಿರೀಕ್ಷಿತ ಚಿತ್ರಗಳಾದ ಪುನೀತ್ ಅಣ್ಣಾಬಾಂಡ್ ಹಾಗೂ ಉಪೇಂದ್ರ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ ಎಂಬ ಸುದ್ದಿ ಬಂದಿವೆ. ಅಂದರೆ ಏಪ್ರಿಲ್ 27 ರಂದೇ ಈ ಎರಡೂ ಚಿತ್ರಗಳು ತೆರೆಗೆ ಬರಲಿವೆ. ಆದರೆ ಇತ್ತೀಚಿಗೆ ಪುನೀತ್ ಚಿತ್ರಗಳು ಗುರುವಾರದಂದು ಬಿಡುಗಡೆ ಆಗುತ್ತಿರುವುದರಿಂದ ಅಣ್ಣಾಬಾಂಡ್ 26ಕ್ಕೆ ರಿಲೀಸ್ ಆಗಬಹುದಷ್ಟೇ. ಹೇಗೇ ಆದರೂ ಸ್ಪರ್ಧೆ ಗ್ಯಾರಂಟಿ.
ಅಣ್ಣಾಬಾಂಡ್ ಸೆಟ್ಟೇರಿದ ದಿನದಿಂದಲೂ ಡಾ ರಾಜ್ ಹುಟ್ಟುಹಬ್ಬ, ಏಪ್ರಿಲ್ 24ಕ್ಕೆ ಬಿಡುಗಡೆ ಎಂದೇ ಹೇಳಲಾಗಿತ್ತಾದರೂ ಆ ದಿನವೇ ಎರಡು ಹಬ್ಬಗಳು ಕನ್ನಡಿಗರಿಗೆ ದಕ್ಕುವುದು ತಪ್ಪಿದೆ. ಆದರೆ ಅಣ್ಣಾಬಾಂಡ್ ಹಾಗೂ ಕಠಾರಿವೀರ ಎರಡೂ ಚಿತ್ರಗಳೂ ಪುನೀತ್ ಹಾಗೂ ಉಪೇಂದ್ರ ಇಬ್ಬರೂ ಅತ್ಯಂತ ಮಹಾತ್ವಾಕಾಂಕ್ಷೆ ಇಟ್ಟಿರುವ ಚಿತ್ರವಾದ್ದರಿಂದ ಬಿಡುಗಡೆ ಬದಲಾದರೆ ಆಶ್ಚರ್ಯವೇನಿಲ್ಲ. ಈ ಮೊದಲೂ ಕೂಡ ಈ ಇಬ್ಬರು ಸ್ಟಾರ್ ಗಳ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗಿದ್ದವು.
ಕೆಲವರ ಪ್ರಕಾರ ಒಂದೇ ದಿನ ಇವೆರಡೂ ಬಿಡುಗಡೆಯಾದರೆ ನಿರ್ಮಾಪಕರಿಗೆ ನಡುಕ ತಪ್ಪಿದ್ದಲ್ಲ. ಈ ಕಾರಣಕ್ಕಾದರೂ ಬಿಡುಗಡೆ ಬದಲಾದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಪುನೀತ್ ಅಣ್ಣಾಬಾಂಡ್ ತಂಡ ಚಿತ್ರೀಕರಣಕ್ಕಾಗಿ ಸ್ಪೇನ್ ದೇಶದಲ್ಲಿದೆ. ಕಠಾರಿವೀರ ಏಪ್ರಿಲ್ ಮೊದಲವಾರ ವಿದೇಶಕ್ಕೆ ಪ್ರಯಾಣ ಬೆಳೆಸಲಿದೆ.

No comments:
Post a Comment