Tuesday, 7 February 2012

ಆರಕ್ಷಕ 'ಕನ್ ಫ್ಯೂಸನ್' ಬಗ್ಗೆ ಉಪೇಂದ್ರ ಉತ್ತರ


ಪಿ. ವಾಸು ಪತ್ರಕರ್ತರ 'ಪ್ರಶ್ನೆ'ಗಳಿಗೆ ಉತ್ತರಿಸುತ್ತಾ ಮೊದಲು 'ಗೊಂದಲ'ಗಳನ್ನು ನಿವಾರಿಸುವ ಯತ್ನ ಮಾಡಿದರು. "ಆರಕ್ಷಕ' ಗಳಿಕೆ ಚೆನ್ನಾಗಿದೆ. ಈ ಚಿತ್ರದಲ್ಲಿ ಕಂಡುಬರುವ ಗೊಂದಲಗಳು ಉದ್ದೇಶಪೂರ್ವಕ. ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದರಿಂದ ಕನ್‌ಫ್ಯೂಸ್ ಮಾಡುವ ಅನಿವಾರ್ಯತೆಯಿತ್ತು. ನನ್ನ ವಿಭಿನ್ನ ಪ್ರಯತ್ನದ ಚಿತ್ರಕತೆಯ ಬಗ್ಗೆ ಸಂತಸವಿದೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ. 

ಈ ವೇಳೆ 'ಆರಕ್ಷಕ' ರಿಮೇಕ್ ಆವೃತ್ತಿಗಾಗಿ ತಮಿಳು-ತೆಲುಗಿನಲ್ಲಿ ಭಾರೀ ಬೇಡಿಕೆ ಇರುವ ಸಂಗತಿಯನ್ನೂ ವಾಸು ಹೇಳಿದರು. ಆದರೆ ಈ ಬಗ್ಗೆ ಹೆಚ್ಚು ಮಾಹಿತಿ ನೀಡಲಿಲ್ಲ. ಆದರೂ, ಆಪ್ತಮಿತ್ರ ಮತ್ತು ಆಪ್ತರಕ್ಷಕ ಚಿತ್ರಗಳು ತಮಿಳು-ತೆಲುಗಿಗೆ ರಿಮೇಕ್ ಆಗಿರುವುದರಿಂದ 'ಆರಕ್ಷಕ'ದ ರಿಮೇಕಿನಲ್ಲಿ ನಟಿಸಲು ದೊಡ್ಡ ದೊಡ್ಡ ಹೀರೋಗಳು ಮುಂದೆ ಬಂದರೂ ಅಚ್ಚರಿಯಿಲ್ಲ ಎನ್ನಬಹುದು.

ಆರಕ್ಷಕ ನಾಯಕ ರಿಯಲ್ ಸ್ಟಾರ್ ಉಪೇಂದ್ರ, ನನ್ನ ನಿರ್ದೇಶನದ 'ಎ'ಯಲ್ಲಿ ಬುದ್ಧಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ಹಾಕಿಸಿದ್ದೆ. ನನ್ನ ಪ್ರಕಾರ 'ಆರಕ್ಷಕ' ಚಿತ್ರ ಅತಿ ಬುದ್ಧಿವಂತರಿಗೆ ಮಾತ್ರ" ಎಂದರು. ಮುಂದುವರಿದ ಉಪ್ಪಿ "ಚಿತ್ರಕತೆಯಲ್ಲಿ ಕ್ಲಿಷ್ಟತೆಯಿದೆ. ಒಂದೇ ಸಲ ನೋಡಿದಾಗ ಅರ್ಥವಾಗೋದು ಕಷ್ಟ, ಎರಡನೇ ಬಾರಿ ಬರೋದು ಅನಿವಾರ್ಯ. 

"ಒಂದಿಷ್ಟು ಗೊಂದಲಗಳು ಸಾಮಾನ್ಯ ಪ್ರೇಕ್ಷಕರಲ್ಲಿ ಉಂಟಾಗಿರುವುದು ನಿಜ. ಆದರೆ ಅದು ಚಿತ್ರಕ್ಕೆ ಹಿನ್ನಡೆಯಲ್ಲ . ವಾಸು ಈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಅತಿ ಬುದ್ಧಿವಂತರು ಮೊದಲಬಾರಿಯೆ ಅರ್ಥಮಾಡಿಕೊಂಡು ಚೆನ್ನಾಗಿದೆ ಎನ್ನುತ್ತಿದ್ದಾರೆ" ಎಂಬ ಗುಟ್ಟನ್ನೂ ಹೇಳಿಕೊಂಡರು. ಒಟ್ಟಿನಲ್ಲಿ ಆರಕ್ಷಕ 'ಅತಿ ಬುದ್ಧಿವಂತರಿಗೆ', ದಡ್ಡರಿಗೆ 'ರಕ್ಷಕ' ಯಾರೋ ಏನೋ! 

No comments:

Post a Comment