Tuesday, 7 February 2012

ತಮಿಳು, ತೆಲುಗಿಗೆ ರೀಮೇಕ್ ಆಗಲಿದೆ 'ಆರಕ್ಷಕ'


ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ 'ಆರಕ್ಷಕ' ಚಿತ್ರ, 'ಚಿಂಗಾರಿ' ಆರ್ಭಟದ ನಡುವೆಯೂ ಬಾಕ್ಸಾಫೀಸಿನಲ್ಲಿ ಮುಗ್ಗರಿಸದೇ ನಿರಾತಂಕವಾಗಿ ಸಾಗುತ್ತಿದೆ. ಈ ಚಿತ್ರ ಮುಂದೆ ತಮಿಳು-ತೆಲುಗಿಗೆ ರಿಮೇಕ್ ಆಗಲಿರುವುದನ್ನು ಖಾತ್ರಿ ಮಾಡಿದೆ ಆರಕ್ಷಕ ಚಿತ್ರತಂಡ. ಅಲ್ಲಿ ನಾಯಕರಾರು ಎಂಬ ಪ್ರಶ್ನೆಗೆ ಮುಂದೆ ಉತ್ತರ ದೊರೆಯಬೇಕಾಗಿದೆ. 

ಬರೀ 80 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಆರಕ್ಷಕ' ಹೆಚ್ಚು ಪ್ರಚಾರವನ್ನೇ ಪಡೆದುಕೊಂಡಿರಲಿಲ್ಲ. ಹೀಗಿದ್ದರೂ ಚಿತ್ರ ಮೊದಲ ವಾರದಲ್ಲಿ ರು. 3.42 ಕೋಟಿ ರು. ಗಳಿಕೆ ದಾಖಲಿಸಿದೆ. ಥಿಯೇಟರು ಬಾಡಿಗೆ ಕಳೆದು ನಿರ್ಮಾಪಕ ಕೃಷ್ಣ ಪ್ರಜ್ವಲ್ ಕೈಗೆ 2.5 ಕೋಟಿ ಸೇರಿದೆ. ಚಿತ್ರದ ಒಟ್ಟು ಬಜೆಟ್ 7 ಕೋಟಿ ರೂಪಾಯಿಗಳು.

ಮೊದಲ ವಾರದಲ್ಲೇ ಇಷ್ಟು ಗಳಿಕೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಲಾಭವಾಗುವುದು ಖಂಡಿತ ಎಂಬುದು ಚಿತ್ರತಂಡ ಹಾಗೂ ಗಾಂಧಿನಗರದ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಚಿತ್ರ ಗೆಲುವಿನತ್ತ ಮುಖಮಾಡಿರುವುದರ ಬಗ್ಗೆ ಶನಿವಾರ ನಡೆಸಲಾದ ಪತ್ರಿಕಾಗೋಷ್ಠಿಗೆ ಎಲ್ಲರಿಗಿಂತ ಮುಂಚೆ ಬಂದವರು ನಿರ್ದೇಶಕ ಪಿ. ವಾಸು. ಸ್ವಲ್ಪ ತಡವಾಗಿ ಬಂದರು ಆರಕ್ಷಕದ ನಾಯಕ ಹಾಗೂ ರಿಯಲ್ ಸ್ಟಾರ್ ಉಪೇಂದ್ರ. 



No comments:

Post a Comment