ಇಂತದ್ದೊಂದು ಐಡಿಯಾ ಮಾಡ್ಯಾರಾ ನಿರ್ದೇಶಕ ಪುರಿ ಜಗನ್ನಾಥ್? ಮಹೇಶ್ ಬಾಬು ನಾಯಕರಾಗಿರುವ 'ಬಿಸಿನೆಸ್‌ಮ್ಯಾನ್' ತೆಲುಗು ಚಿತ್ರವನ್ನು ನೋಡಿದಾಗ ಇಲ್ಲ ಅನ್ನಿಸದೇ ಇರದು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಸೂಪರ್' ಚಿತ್ರದಲ್ಲಿನ ಪರಿಕಲ್ಪನೆಯೇ ಅಲ್ಲೂ ಇದೆ ಅಂತ ಹೇಳದೆ ವಿಧಿಯಿಲ್ಲ!
'ಬಿಸಿನೆಸ್‌ಮ್ಯಾನ್' ಸಿನಿಮಾದ ಕಥೆ ನಿಂತಿರುವುದೇ ಕಾರ್ಪೊರೇಟ್ ರೌಡಿಸಂ ಮೇಲೆ. ಈ ಕಲ್ಪನೆಯನ್ನು ಮೊದಲು ಹುಟ್ಟು ಹಾಕಿದ್ದು ಉಪೇಂದ್ರ. ತನ್ನ ಸೂಪರ್ ಚಿತ್ರದಲ್ಲವರು ರೌಡಿಸಂ ಕಂಪನಿ ಬಗ್ಗೆ ಪರಿಚಯಿಸಿದ್ದರು. 2030ರಲ್ಲಿ ಭಾರತ ಹೇಗಿರುತ್ತದೆ ಅನ್ನೋದು ಪ್ರಮುಖವಾಗಿದ್ದ ಸೂಪರ್‌ನಲ್ಲಿ ಕಾರ್ಪೊರೇಟ್ ರೌಡಿಸಂ ಒಂದು ಭಾಗವಾಗಿತ್ತು, ಅಷ್ಟೇ. ಆದರೆ ಇಡೀ 'ಬಿಸಿನೆಸ್‌ಮ್ಯಾನ್' ನಿಂತಿರುವುದೇ ಅದರ ಮೇಲೆ.
ಹಾಗಿದ್ರೆ ಪುರಿ ಜಗನ್ನಾಥ್ ಉಪ್ಪಿಯ 'ಸೂಪರ್' ಚಿತ್ರದ ಪರಿಕಲ್ಪನೆಯನ್ನು ಕಾಪಿ ಹೊಡೆದರೇ? ಹಾಗೆಂದು ನೇರಾನೇರವಾಗಿ ಹೇಳುವುದು ಕಷ್ಟ. ಆದರೆ ಸೂಪರ್ ಚಿತ್ರದಿಂದ ಸ್ಫೂರ್ತಿ ಪಡೆದಿರುವುದಂತೂ ಸ್ಪಷ್ಟ. ಉಪ್ಪಿಯ ಕಲ್ಪನೆಯನ್ನೇ ವಿಸ್ತರಿಸಿ ಕಥೆ ಮಾಡಿರುವ ಸಾಧ್ಯತೆಗಳಿವೆ ಅಂತ ತೆಲುಗು ಸಿನಿಮಾ ನೋಡಿದ ಹಲವರ ಅಂಬೋಣ.
2010ರ ಡಿಸೆಂಬರಿನಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಿದ್ದ ಸೂಪರ್ ಜಯಭೇರಿ ಬಾರಿಸಿತ್ತು. ನಯನತಾರಾ ನಾಯಕಿಯಾಗಿದ್ದ ಈ ಚಿತ್ರ ನಂತರ ತೆಲುಗಿನಲ್ಲೂ ಬಿಡುಗಡೆಯಾಗಿತ್ತು. ಅದಾದ ಒಂದು ವರ್ಷದ ನಂತರ ಬಿಸಿನೆಸ್‌ಮ್ಯಾನ್ ತೆರೆಗೆ ಬಂದಿದೆ. ಹಾಗಾಗಿ ಪುರಿ ಕನ್ನಡ ಚಿತ್ರದ ಎಳೆಯನ್ನು ಬಳಸಿಕೊಂಡಿರಲೂ ಬಹುದು ಅನ್ನೋ ವಾದಗಳೂ ಇವೆ.
ಅದೇನೇ ಇರಲಿ, ಕನ್ನಡ ಚಿತ್ರಗಳನ್ನೂ ನಿರ್ದೇಶಿಸಿರುವ ಜನಪ್ರಿಯ ನಿರ್ದೇಶಕ ಪುರಿ ಜಗನ್ನಾಥ್, ಸ್ಫೂರ್ತಿ ಪಡೆದಿರುವುದು ನಿಜವೇ ಆಗಿದ್ದರೆ, ಅದು ನಮಗೆ ಹೆಮ್ಮೆಯ ವಿಚಾರವಲ್ಲದೆ ಮತ್ತೇನು?

No comments:
Post a Comment