ರಿಯಲ್ ಸ್ಟಾರ್ ಉಪೇಂದ್ರ 'ಸೂಪರ್' ಭಾಗ-2 ಮಾಡುತ್ತಿದ್ದಾರೆ ಅನ್ನೋದು ನಿಜವಲ್ಲ. ಹಾಗಂತ ಸ್ವತಃ ಉಪ್ಪಿ ಸ್ಪಷ್ಟನೆ ನೀಡಿದ್ದಾರೆ. ಸೂಪರ್ ಕಥೆ ಅದೇ ಚಿತ್ರದ ಅಂತ್ಯದಲ್ಲಿ ಮುಗಿದು ಹೋಗಿದೆ. ಮತ್ತೆ ಕಥೆ ಮುಂದುವರಿಸುವುದು ಪಥ್ಯವಲ್ಲ. ಖಂಡಿತಕ್ಕೂ ನಾನು ಎರಡನೇ ಭಾಗ ಮಾಡುತ್ತಿಲ್ಲ. ಇದು ಕೇವಲ ವದಂತಿ ಮಾತ್ರ ಎಂದಿದ್ದಾರೆ.
2030ರಲ್ಲಿ ಅತ್ಯಾಧುನಿಕ, ಶ್ರೀಮಂತ ಮತ್ತು ಸಾಂಪ್ರದಾಯಿಕ ಭಾರತ ನಿರ್ಮಾಣವಾಗುವುದು ಹೇಗೆ ಎಂಬುದನ್ನು ತನ್ನದೇ ಆದ ರೀತಿಯಲ್ಲಿ 'ಸೂಪರ್' ಮೂಲಕ ಕಟ್ಟಿಕೊಟ್ಟಿದ್ದರು ಉಪ್ಪಿ. ರಾಜಕಾರಣಿಗಳನ್ನು ಏನು ಮಾಡಬೇಕು? ಕೃಷಿ-ರೈತನಿಗೆ ಯಾಕೆ ಪ್ರಾಧಾನ್ಯತೆ ನೀಡಬೇಕು? ಬಡವ-ಶ್ರೀಮಂತನ ನಡುವಿನ ಅಂತರ ಹೇಗಿರಬೇಕು ಮುಂತಾದುವುದನ್ನು ಹೇಳುತ್ತಾ, ಹೀಗಾದರೆ 2030ರಲ್ಲಿ ಭಾರತ ಹೀಗಿರುತ್ತದೆ ಎಂದಿದ್ದರು.
ಉಪ್ಪಿ ಪ್ರಕಾರ, ಈ ಕಥೆ ಮುಗಿದಿದೆ. ಮುಂದುವರಿಸುವುದು ಸಾಧ್ಯವಿಲ್ಲ. ಅಂತಹ ಯತ್ನವನ್ನೂ ಅವರು ಮಾಡಿಲ್ಲ. ಆದರೂ ಗಾಳಿಸುದ್ದಿ ಹುಟ್ಟಿಕೊಂಡಿದೆ.
ಹಾಗೆಂದು ಉಪ್ಪಿ ಸಿನಿಮಾ ಮಾಡುತ್ತಿಲ್ಲ ಎಂದರ್ಥವಲ್ಲ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಉಪ್ಪಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಎಲ್ಲವೂ ಅಂತಿಮ ಹಂತಕ್ಕೆ ಬಂದ ಮೇಲೆ ನಾನೇ ಹೇಳುತ್ತೇನೆ ಬಿಡಿ ಎಂದಿದ್ದಾರೆ.
ಪ್ರಸಕ್ತ ನನ್ನ ಕೈಯಲ್ಲಿ ಎರಡ್ಮೂರು ಸಿನಿಮಾಗಳಿವೆ. ಮತ್ತೆ ನಿರ್ದೇಶನಕ್ಕೆ ಹೊರಳಬೇಕೆಂದರೆ, ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಬೇಕು. ಮುಂಬರುವ ಟೋಪಿವಾಲಾ ಚಿತ್ರದ ಕಥೆ-ಚಿತ್ರಕಥೆ ನಾನೇ ಬರೆದಿದ್ದೇನೆ. ಹಾಗಾಗಿ ನನ್ನ ಕ್ರಿಯಾಶೀಲತೆಯನ್ನು ಇದರ ಮೂಲಕ ಕೊಂಚ ತೃಪ್ತಿಪಡಿಸಿದ್ದೇನೆ ಅನ್ನೋ ಉಪ್ಪಿ, ಪಿ. ವಾಸು ನಿರ್ದೇಶನದ ಆರಕ್ಷಕ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸದ್ಯಕ್ಕಂತೂ ಇಂತದ್ದೇ ದಿನ ತನ್ನ ಚಿತ್ರ ಆರಂಭವಾಗಲಿದೆ ಅನ್ನೋದನ್ನು ಘೋಷಿಸುವ ಸ್ಥಿತಿಯಲ್ಲಿಲ್ಲ ಉಪೇಂದ್ರ. "ಇದುವರೆಗೆ ಯಾವುದನ್ನೂ ನಿರ್ಧರಿಸಿಲ್ಲ. ಆದರೂ ಈ ವರ್ಷದ ಕೊನೆಯಲ್ಲಿ ನನ್ನ ಚಿತ್ರದ ಬಗ್ಗೆ ಮಾಹಿತಿ ನೀಡುವ ಭರವಸೆ ನನ್ನಲ್ಲಿದೆ. ನೋಡೋಣ" ಅನ್ನುತ್ತಾರೆ.
ಅಂತೂ ಉಪ್ಪಿ ಹೀಗೆ ಹೇಳಿರುವುದರಿಂದ, ಇನ್ನೆರಡು ವರ್ಷ ಅವರ ನಿರ್ದೇಶನದ ಚಿತ್ರ ಬರೋದಿಲ್ಲ ಅನ್ನೋದು ಖಾತ್ರಿಯಾಗಿದೆ. ಏನಂತೀರಾ?

No comments:
Post a Comment