ಸುಂದರಿಯರಾದ ನಟಿ ಸದಾ, ರಾಗಿಣಿ ದ್ವಿವೇದಿ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಇಂಡೋನೇಷಿಯಾಗೆ ಹಾರಿದ್ದಾರೆ. ಮೂವರು ಅಲ್ಲಿ ಕುಣಿದು ಕುಪ್ಪಳಿಸಿ ವಾಪಸ್ಸಾಗಲಿದ್ದಾರೆ. ಪಿ ವಾಸು ಆಕ್ಷನ್ ಕಟ್‌ನಲ್ಲಿ 'ಆರಕ್ಷಕ' ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇಂಡೋನೇಷಿಯಾದಲ್ಲಿ ನಡೆಯಲಿದೆ.
ಚಿತ್ರದ ಒಂದು ಹಾಡನ್ನು ಉಪೇಂದ್ರ ಹಾಗೂ ಸದಾ ಮೇಲೆ ಇನ್ನೊಂದು ಸೋಲೋ ಗೀತೆಯನ್ನು ರಾಗಿಣಿ ಮೇಲೆ ಚಿತ್ರೀಕರಿಸಲಾಗುತ್ತದೆ. ಈಗಾಗಲೆ 'ಆರಕ್ಷಕ' ಚಿತ್ರದ ಮಾತಿನ ಭಾಗ ಮುಕ್ತಾಯವಾಗಿದೆ. ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತ ಸಂಯೋಜನೆ ಇದೆ.
ಈಗಾಗಲೆ ಒಂದು ಹಾಡನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಸ್ವತಃ ಉಪ್ಪಿಯೇ ಹೆಣೆದಿರುವ "ಥೂ ನನ್ಮಕ್ಕಳ ಗಂಡಸರಾ ನೀವು ಮೀಸೆ ಇದ್ದರೆ. ಎಪ್ಪತ್ತರಲ್ಲೂ ಎದ್ದು ಬಂದ್ರಲ್ಲೋ ಅಣ್ಣಾ ಹಜಾರೆ..." ಎಂಬ ಹಾಡನ್ನು ಸಂತೋಷ್ ಪತಾಜೆ ತಮ್ಮ ಕ್ಯಾಮೆರಾದಲ್ಲಿ ಬಂಧಿಸಿದ್ದಾರೆ. ಕೃಷ್ಣ ಪ್ರಜ್ವಲ್ ನಿರ್ಮಿಸುತ್ತಿರುವ ಚಿತ್ರವಿದು.

No comments:
Post a Comment