ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಸುಧಾ' ವಾರಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಾವೇ ಸ್ವತಃ ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟುವುದಾಗಿ ಹೇಳಿಕೊಂಡಿದ್ದಾರೆ. ಆ ಸಂಸ್ಥೆಯ ಹೆಸರು 'ಶ್ರೀಮುತ್ತು'. ಉತ್ಸಾಹದಿಂದ ಬರುವ ಹೊಸಬರಿಗೂ ಚಾನ್ಸ್ ನೀಡುವ ಭರವಸೆಯನ್ನೂ ಶಿವಣ್ಣ ನೀಡಿದ್ದಾರೆ.
ತಮ್ಮದೇ ಸಂಸ್ಥೆಯ ಚಿತ್ರವನ್ನು ನಿರ್ದೇಶಿಸಲು ನಟ, ನಿರ್ದೇಶಕ ಉಪೇಂದ್ರ ಜೊತೆಯೂ ಶಿವಣ್ಣ ಮಾತುಕತೆ ನಡೆಸಿದ್ದಾರೆ. ಉಪ್ಪಿಗೆ ಕಾಲದ ಗಡುವು ನೀಡಲು ಆಗುವುದಿಲ್ಲ. ಒಳ್ಳೆಯ ಸ್ಕ್ರಿಪ್ಟ್ ಮಾಡಿಕೊಂಡು ಬರಲಿ ಆಮೇಲೆ ನಮ್ಮ ಸಂಸ್ಥೆಯೇ ಅದನ್ನು ನಿರ್ಮಿಸುತ್ತದೆ ಎಂದಿದ್ದಾರೆ.
ಉಪೇಂದ್ರ ನಿರ್ದೇಶನದಲ್ಲಿ ನಟಿಸುವ ಬಯಕೆಯನ್ನೂ ವ್ಯಕ್ತಪಡಿಸಿರುವ ಶಿವಣ್ಣ, ಚಿತ್ರ ನಿರ್ದೇಶನದ ಆಸೆಯನ್ನೂ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟನೆ ಜೊತೆಗೆ ನಿರ್ದೇಶನ ಸಾಧ್ಯವಾದರೆ ಇನ್ನೂ ಸಂತಸ ಎಂದಿದ್ದಾರೆ. ಏನಾಗುತ್ತದೋ ನೋಡೋಣ. ಮುಂದಿನ ತಿಂಗಳೇ ಉಪೇಂದ್ರ ಅವರಿಗೆ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಬನ್ನಿ ಎನ್ನಲು ಸಾಧ್ಯವಿಲ್ಲ ಎಂದಿರುವುದು ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕಿದೆ.

No comments:
Post a Comment