Wednesday, 27 July 2011

ಉಪೇಂದ್ರ "ಗಾಡ್ ಫಾದರ್‌"ಗೆ ಸೂಪರ್ ಕ್ಲೈಮ್ಯಾಕ್ಸ್


ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ 'ಗಾಡ್ ಫಾದರ್' ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಈ ಚಿತ್ರವನ್ನು ನಿರ್ದೇಶಕರಾಗಿ ಬದಲಾದ ಛಾಯಾಗ್ರಾಹಕ ಶ್ರೀರಾಮ್ ಆಕ್ಷನ್ ಕಟ್ ಹೇಳಿದ್ದಾರೆ.ಕೆ ಮಂಜು ನಿರ್ಮಾಣದ ಈ ಚಿತ್ರ ತಮಿಳಿನ ಹಿಟ್ ಚಿತ್ರ 'ವರಲಾರು' ರೀಮೇಕ್.

ದೊಡ್ಡಬಳ್ಳಾಪುರದಲ್ಲಿ ಹಾಕಿದ್ದ 'ಕಲ್ಯಾಣ ಮಂಟಪ' ಸೆಟ್‌ನಲ್ಲಿ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಈ ಸನ್ನಿವೇಶದೊಂದಿಗೆ ಗಾಡ್ ಫಾದರ್ ಚಿತ್ರೀಕರಣ ಮುಗಿದಿದೆ.ಈ ಚಿತ್ರದಲ್ಲಿ ಉಪ್ಪಿ ತ್ರಿಪಾತ್ರಾಭಿನಯ ನೀಡಿದ್ದಾರೆ.

ಅಪ್ಪನಾಗಿ ಒಂದು ಪಾತ್ರ. ತಂದೆಗೆ ತಕ್ಕ ಮಕ್ಕಳಾಗಿ ಇನ್ನೆರಡು ಪಾತ್ರದಲ್ಲಿ ಉಪ್ಪಿ ಕಾಣಿಸಲಿದ್ದಾರೆ. ಜಯಮಾಲಾ ಅವರ ಪುತ್ರಿ ಸೌಂದರ್ಯ ಚಿತ್ರದ ನಾಯಕಿ. ಶಂಕರ್ ಐಪಿಎಸ್ ಚಿತ್ರದಲ್ಲಿ ಅಭಿನಯಿಸಿದ್ದ ಕ್ಯಾಥರೀನ್ ಚಿತ್ರದ ಮತ್ತೊಬ್ಬ ನಾಯಕಿ.

'ಗಾಡ್ ಫಾದರ್' ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಎ ಆರ್ ರೆಹಮಾನ್ ಸಂಗೀತ. ರೆಹಮಾನ್ ಸಂಗೀತ ಸಂಯೋಜಿಸುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಉಪೇಂದ್ರ ಸಾಹಿತ್ಯ ಚಿತ್ರಕ್ಕಿದೆ. ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ಕೆ ಕಲ್ಯಾಣ್ ಅವರ ಸಾಹಿತ್ಯವೂ ಚಿತ್ರಕ್ಕಿದೆ.

ಈಗಾಗಲೆ ಮೂರು ಹಂತದ ಚಿತ್ರೀಕರಣ ಮುಗಿಸಲಾಗಿದ್ದು ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆದಿದೆ. ಮಡಿಕೇರಿ, ಬೆಂಗಳೂರು ಹಾಗೂ ಸ್ವಿಟ್ಜರ‍್ಲ್ಯಾಂಡ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಉಪ್ಪಿ ಅಭಿನಯದ ಭಾರಿ ಬಜೆಟ್ ಚಿತ್ರ 
ಇದಾಗಿದೆ.

No comments:

Post a Comment