Tuesday, 26 July 2011

ರಿಯಲ್ ಸ್ಟಾರ್ ಉಪೇಂದ್ರನ ಡಿಫರೆಂಟ್ 'ಸೈಕಲ್‌ ಸಂಭಾಷಣೆ'!


"ಅವರಿರೋದೇ ಹಾಗೆ. ಏನಾದರೂ ವಿಭಿನ್ನವಾದುದನ್ನ ಮಾಡ್ತಾನೇ ಇರ್ತಾರೆ; ಮಾಡೋದರ ಜೊತೆಗೆ ತಮಗಿಂತ ಹಿರಿಯರಲ್ಲಿ ಉತ್ಸಾಹ ತುಂಬ್ತಾರೆ, ತಮಗಿಂತ ಕಿರಿಯರಿಗೆ ಆದರ್ಶವಾಗ್ತಾರೆ. ಒಟ್ನಲ್ಲಿ ಏನು ಮಾಡಿದ್ರೂ ಡಿಫರೆಂಟಾಗಿ ಮಾಡ್ಬೇಕು ಅನ್ನೋ ವ್ಯಕ್ತಿ ಈತ" -ಇದು ಉಪೇಂದ್ರರ ಕುರಿತಾದ ಗಾಂಧಿನಗರದ ಪಂಡಿತರೊಬ್ಬರ ಉವಾಚ.

ಇದರಲ್ಲಿ ಉತ್ಪ್ರೇಕ್ಷೆಯಿಲ್ಲ. ಉಪೇಂದ್ರ ಇರುವುದೇ ಹೀಗೆ. ಅರ್ಥವಾಗದವರಿಗೆ ಅವರು ಗೊಂದಲದ ಗೂಡು. ಅರ್ಥವಾದವರಿಗೆ ಸರಳವ್ಯಕ್ತಿ, ವಿಶಾಲ ಹೃದಯಿ. ಅವರ ವಿಶಾಲ ಹೃದಯಕ್ಕೆ ಸಾಕ್ಷಿಯಾಗುವ ಸುದ್ದಿಯೊಂದನ್ನು 'ಮರ್ಯಾದೆ ರಾಮಣ್ಣ' ಚಿತ್ರತಂಡವು ನೀಡಿದೆ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಾಸ್ಯನಟ ಕೋಮಲ್‌ ಕುಮಾರ್ ನಟಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಆದರೆ ಈ ಚಿತ್ರದುದ್ದಕ್ಕೂ ಕೋಮಲ್‌ ಜೊತೆಯಲ್ಲಿ ಕಾಣಿಸಿಕೊಳ್ಳುವ ಸೈಕಲ್‌ಗೂ ಅಷ್ಟೇ ಪ್ರಾಧಾನ್ಯತೆಯಿದೆಯಂತೆ ಮತ್ತು ಅದು ಮಾತನಾಡುತ್ತದಂತೆ. ಸದರಿ ಸೈಕಲ್‌ ಪಾತ್ರಕ್ಕೆ ಧ್ವನಿ ನೀಡಿರುವವರು ಉಪೇಂದ್ರ ಎಂಬುದು ಮೆಚ್ಚುಗೆಯ ಸಂಗತಿ.

ಈಗಾಗಲೇ 'ಎ' ಚಿತ್ರದ 'ಈ ಪ್ರೀತೀ ಈ ಪ್ರೇಮಾ... ಎಲ್ಲಾ ಪುಸ್ತಕದ ಬದ್ನೇಕಾಯಿ' ಎಂಬ ಡೈಲಾಗ್‌ನಿಂದ, 'ರಕ್ತಕಣ್ಣೀರು' ಚಿತ್ರದ 'ಐ ಡೋಂಟ್‌ ಲೈಕ್‌ ಇಟ್‌.... ಕಾಂತಾ' ಎಂಬ ವಿಶಿಷ್ಟ ಮ್ಯಾನರಿಸಂನಿಂದ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರರಾಗಿರುವ ಉಪೇಂದ್ರ, ಸದರಿ 'ಸೈಕಲ್‌-ಸಂಭಾಷಣೆ'ಯಲ್ಲಿ ಯಾವ ಮೋಡಿಯನ್ನು ಮಾಡಿದ್ದಾರೆ ಎಂದು ಕಾದುನೋಡುವಂತಾಗಿದೆ.

ತಮ್ಮಯ್ಯ ಕುಮರೇಶ್‌ ಬಾಬು 'ಮರ್ಯಾದೆ ರಾಮಣ್ಣ' ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವವರು ಪಿ.ವಿ.ಎಸ್‌.ಗುರುಪ್ರಸಾದ್‌. ಆರ್‌.ಗಿರಿ ಛಾಯಾಗ್ರಹಣ, ಎಂ.ಎಂ.ಕೀರವಾಣಿ ಸಂಗೀತ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಿಶಾ ಷಾ, ಮುಖೇಶ್ವರಿ, ಬ್ಯಾಂಕ್‌ ಜನಾರ್ಧನ್‌, ದೊಡ್ಡಣ್ಣ, ಸಿಹಿಕಹಿ ಚಂದ್ರು, ಶಂಕರ್‌ಭಟ್‌, ರಮೇಶ್‌ಭಟ್‌, ರಾಜೇಶ್‌ ಮೊದಲಾದವರಿದ್ದಾರೆ. 

No comments:

Post a Comment