Thursday, 30 June 2011

ಉಪೇಂದ್ರ ಜೊತೆ ಕೈಜೋಡಿಸಿದ ಜೋಗಿ ಪ್ರೇಮ್



ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಜೋಗಿ ಪ್ರೇಮ್ ಕೈಜೋಡಿಸಿದ್ದಾರೆ. ಇವರಿಬ್ಬರು ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈ ಹಿಂದೆಯೇ ಇತ್ತು. ಈಗ ಅದು ನಿಜವಾಗಿದೆ. ಇವರಿಬ್ಬರ ಸಂಗಮದ ಚಿತ್ರಕ್ಕೆ 'ಡೈರೆಕ್ಟರ್' ಎಂದು ಹೆಸರಿಡಲಾಗಿದೆ. ಈ ಚಿತ್ರ ಸೆಪ್ಟೆಂಬರ್ 18ರಂದು ಸೆಟ್ಟೇರಲಿದೆ. ಚಿತ್ರದ ನಿರ್ಮಾಪಕರು ಮುನಿರತ್ನ.

ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಚಿತ್ರ ಸೆಟ್ಟೇರಲಿದೆ ಎಂದು ಮುನಿರತ್ನ ತಿಳಿಸಿದ್ದಾರೆ. ಜೋಗಯ್ಯ ಚಿತ್ರದಲ್ಲಿ ಪ್ರೇಮ್ ಬ್ಯುಸಿಯಾದ ಕಾರಣ ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ ಬ್ರೇಕ್ ಬಿದ್ದಿತ್ತು. ಈಗ ಈ ಚಿತ್ರ ಸೆಟ್ಟೇರಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ಮುನಿರತ್ನ.

ಚಿತ್ರದ ಹೆಸರೆ ಹೇಳುವಂತೆ ನಿರ್ದೇಶಕ ಹಾಗೂ ನಾಯಕ ನಟನೊಬ್ಬನ ಕತೆಯಿದು. ನಾಯಕಿಯ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ ಎಂದಿದ್ದಾರೆ ಮುನಿರತ್ನ. ಅಂದಹಾಗೆ ಇದು ಮಲಯಾಳಂನ ಉದಯಯಾನು ಥರಂ ಚಿತ್ರದ ರೀಮೇಕ್. ಮೋಹನ್ ಲಾಲ್ ಹಾಗೂ ಶ್ರೀನಿವಾಸನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. 

No comments:

Post a Comment