ಸೂಪರ್ ಸ್ಟಾರ್ ರಜನಿಕಾಂತ್ ಮಾಡಬೇಕಿದ್ದ ಮಹತ್ವಾಕಾಂಕ್ಷಿ ಪಾತ್ರ ಹಾಗೂ ಪ್ರಕಾಶ್ ರೈ ಆಸೆಪಟ್ಟಿದ್ದ ಪಾತ್ರ ಉಪೇಂದ್ರ ಪಾಲಾಗಿದೆ. ಅದೇ 'ದಳವಾಯಿ ಮುದ್ದಣ್ಣ'. ರಜನಿಕಾಂತ್ ಈ ಪಾತ್ರ ಮಾಡಬೇಕು ಎಂದು ಕನಸು ಕಂಡಿದ್ದರು. ಪ್ರಕಾಶ್ ರೈ ಜೊತೆ ಟಿ ಎಸ್ ನಾಗಾಭರಣ ಒಂದು ಹಂತದ ಸಿದ್ಧತೆಯೂ ನಡೆಸಿದ್ದರು.
ಪಾತ್ರ ಹೇಗಿರಬೇಕು, ಅದಕ್ಕೆ ಬೇಕಾಗುವ ಕಾಸ್ಟ್ಯುಮ್ಸ್ ಬಗ್ಗೆಯೂ ಪ್ರಕಾಶ್ ರೈ ಜೊತೆ ನಾಗಾಭರಣ ಚರ್ಚಿಸಿದ್ದರು. ಕಾದಂಬರಿ ಆಧಾರಿತ ಚಿತ್ರ ಹಾಗೂ ಪೌರಾಣಿಕ ಪಾತ್ರವಾದ ಕಾರಣ ಈ ಚಿತ್ರದ ಬಗ್ಗೆ ಸುದೀರ್ಘ ಸಮಯದಿಂದ ಚರ್ಚೆ ನಡೆಯುತ್ತಿತ್ತು.
ಸದ್ಯಕ್ಕೆ ಸಿ ನಾರಾಯಣ್ ಅವರ ಬಳಿ ದಳವಾಯಿ ಮುದ್ದಣ್ಣ ಕಾದಂಬರಿ ಹಕ್ಕುಗಳಿವೆ. ಈ ಹಕ್ಕುಗಳನ್ನು ಪಡೆದು ಚಿತ್ರ ಮಾಡಲು ಕೌನ್ಸಿಲರ್ ಮುನಿರತ್ನ ನಾಯ್ಡು ಮುಂದಾಗಿದ್ದಾರೆ. ಟಿ ಎಸ್ ನಾಗಾಭರಣ ನಿರ್ದೇಶನದಲ್ಲಿ ಉಪೇಂದ್ರ ನಾಯಕ ನಟನಾಗಿ ಚಿತ್ರ ಶೀಘ್ರದಲ್ಲೆ ಸೆಟ್ಟೇರಲಿದೆ.
ಚಿತ್ರದುರ್ಗದ ರಕ್ತ ಸಿಕ್ತವಾದ ಇತಿಹಾಸದ ಚಿತ್ರಣದ ಕೊನೆಯ ಅಂಕವಾಗಿ ತ ರಾ ಸು ಅವರು 'ತಿರುಗುಬಾಣ' ಕಾದಂಬರಿಯನ್ನು ಬರೆದರು. ಈ ಕಾದಂಬರಿಯಲ್ಲಿ ದಳವಾಯಿ ಮುದ್ದಣ್ಣ ಮತ್ತು ಅವನ ತಮ್ಮಂದಿರ ಪತನವನ್ನು ಬಹು ಚೆನ್ನಾಗಿ ವಿವರಿಸಿದ್ದಾರೆ.

No comments:
Post a Comment