ರಿಯಲ್ ಸ್ಟಾರ್ ಉಪೇಂದ್ರರಿಗೆ ತ್ರಿಪಾತ್ರ ಹೊಸತೇನಲ್ಲ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಪರಮ ಕ್ರೂರಿಗಳಾಗಿರುವ ಮೂರು ಪಾತ್ರಗಳಲ್ಲಿ ಇದುವರೆಗೆ ನಟಿಸಿಯೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ಅಂತಹ ಪಕ್ಕಾ ಥ್ರಿಲ್ಲರ್ 'ಗಾಡ್‌ಫಾದರ್' ಇದೇ ವಾರ ತೆರೆಗೆ ಬರುತ್ತಿದೆ.
'ಗಾಡ್‌ಫಾದರ್' ಚಿತ್ರದಲ್ಲಿ ಉಪೇಂದ್ರ ಅಪ್ಪ ಮತ್ತು ಇಬ್ಬರು ಮಕ್ಕಳ ಪಾತ್ರವನ್ನು ಮಾಡಿದ್ದಾರೆ. ನಾಯಕಿಯಾಗಿ ಪದಾರ್ಪಣೆ ಮಾಡಿರುವುದು ಜಯಮಾಲಾ ಪುತ್ರಿ ಸೌಂದರ್ಯ. ಕ್ಯಾಥರಿನ್ ಥೆರೆಸಾ, ಸದಾ, ಭೂಮಿಕಾ ಚಾವ್ಲಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರ ನಿರ್ದೇಶಕರು ತಮಿಳಿನ ಖ್ಯಾತ ಕ್ಯಾಮರಾಮ್ಯಾನ್ ಪಿ.ಸಿ. ಶ್ರೀರಾಮ್.
'ಗಾಡ್‌ಫಾದರ್' ಚಿತ್ರದಲ್ಲಿ ಉಪೇಂದ್ರ ಅಪ್ಪ ಮತ್ತು ಇಬ್ಬರು ಮಕ್ಕಳ ಪಾತ್ರವನ್ನು ಮಾಡಿದ್ದಾರೆ. ನಾಯಕಿಯಾಗಿ ಪದಾರ್ಪಣೆ ಮಾಡಿರುವುದು ಜಯಮಾಲಾ ಪುತ್ರಿ ಸೌಂದರ್ಯ. ಕ್ಯಾಥರಿನ್ ಥೆರೆಸಾ, ಸದಾ, ಭೂಮಿಕಾ ಚಾವ್ಲಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರ ನಿರ್ದೇಶಕರು ತಮಿಳಿನ ಖ್ಯಾತ ಕ್ಯಾಮರಾಮ್ಯಾನ್ ಪಿ.ಸಿ. ಶ್ರೀರಾಮ್.
ತಮಿಳು ರಿಮೇಕ್...
ಉಪೇಂದ್ರ ನಾಯಕನಾಗಿರುವ 'ಗಾಡ್‌ಫಾದರ್' ತಮಿಳಿನ 'ವರಲಾರು' ರಿಮೇಕ್. ಅಲ್ಲಿ ಅಜಿತ್ ಕುಮಾರ್ ಮಾಡಿದ್ದ ಪಾತ್ರವನ್ನೇ ಇಲ್ಲಿ ಉಪ್ಪಿ ಮಾಡಿದ್ದಾರೆ. ಭಾರೀ ಪ್ರಶಂಸೆ ಪಡೆದುಕೊಂಡಿದ್ದ ವರಲಾರು ಸೂಪರ್ ಹಿಟ್ ಆಗಿತ್ತು. ಅಜಿತ್ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಹೆಣ್ಣಿನಂತೆ, ಹೆಣ್ಣಿಗನಂತೆ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದರು ಅಜಿತ್.
ಈಗ ಅದೇ ಪಾತ್ರವನ್ನು ಇಲ್ಲಿ ಉಪ್ಪಿ ಮಾಡಿದ್ದಾರೆ. ಸಾಕಷ್ಟು ನಾಯಕರು ರಿಮೇಕ್ ಮಾಡಲು ಹಿಂದೇಟು ಹಾಕಿರುವ ಹೊರತಾಗಿಯೂ ಉಪೇಂದ್ರ ಒಪ್ಪಿದ್ದಾರೆ. ಇದಕ್ಕೆ ಕಾರಣ, ನಿರ್ಮಾಪಕ ಕೆ. ಮಂಜು ಅವರಂತೆ.
ವಾಸ್ತವದಲ್ಲಿ ಈ ಚಿತ್ರದ ತೆಲುಗು ರಿಮೇಕ್‌ನಲ್ಲಿ ಉಪ್ಪಿ ನಟಿಸಬೇಕು ಎಂಬ ಆಫರ್ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು. ಅದನ್ನು ತಿರಸ್ಕರಿಸಿದರೂ, ನಿರ್ಮಾಪಕ ಮಂಜು ಅವರ ಮನವೊಲಿಸಲು ಉಪ್ಪಿಗೆ ಸಾಧ್ಯವಾಗಿಲ್ಲ. ಕೊನೆಗೆ ಧೈರ್ಯ ಮಾಡಿ ಇಂತಹ ಸಾಹಸಕ್ಕಿಳಿದಿದ್ದಾರೆ. ಅಜಿತ್ ಸರಿಸಮಕ್ಕಲ್ಲದಿದ್ದರೂ, ನನ್ನಿಂದ ಸಾಧ್ಯವಾಗುವಷ್ಟು ಉತ್ತಮವಾಗಿ ನಟಿಸಿದ್ದೇನೆ ಎನ್ನುತ್ತಾರೆ ಉಪೇಂದ್ರ.
ಯಾವತ್ತೋ ಬಿಡುಗಡೆಯಾಗಬೇಕಿತ್ತು...
ಮೇ ತಿಂಗಳ ಆರಂಭದಲ್ಲೇ 'ಗಾಡ್‌ಫಾದರ್' ಬಿಡುಗಡೆಯಾಗಬೇಕಿತ್ತು. ಆದರೆ ಆಗ ಅಡ್ಡ ಬಂದದ್ದು ಮುನಿರತ್ನ. ಅವರ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದಿಂದಾಗಿ ಬಿಡುಗಡೆ ಮುಂದಕ್ಕೆ ಹೋಗಿತ್ತು. ಆಗ ಮಂಜು ಮತ್ತು ಮುನಿರತ್ನ ಬೀದಿಯಲ್ಲೇ ಕಚ್ಚಾಡಿದ್ದರು. ಇಡೀ ಸ್ಯಾಂಡಲ್‌ವುಡ್ ಈ ಇಬ್ಬರು ನಿರ್ಮಾಪಕರನ್ನು ಕೆಕ್ಕರಿಸಿ ನೋಡಿತ್ತು.
ಅದಾಗಿ ಹೆಚ್ಚು ಕಡಿಮೆ ಮೂರು ತಿಂಗಳ ನಂತರ ವರಮಹಾಲಕ್ಷ್ಮಿ ಹಬ್ಬದಂದು 'ಗಾಡ್‌ಫಾದರ್' ಬಿಡುಗಡೆಯಾಗುತ್ತಿದೆ. ಜುಲೈ 27ರ ಶುಕ್ರವಾರದಂದು ಈ ಚಿತ್ರ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ.
ರೆಹಮಾನ್ ಸಂಗೀತ...
'ಗಾಡ್‌ಫಾದರ್' ಆಕರ್ಷಣೆಗಳಲ್ಲಿ ಒಂದು ಆಸ್ಕರ್ ಪುರಸ್ಕೃತ ಎ.ಆರ್. ರೆಹಮಾನ್ ಸಂಗೀತ. ಈ ಚಿತ್ರದ ಏಳು ಹಾಡುಗಳಿಗೆ ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಈಗಾಗಲೇ ಕೆಲವು ಹಾಡುಗಳು ಗಮನ ಸೆಳೆಯುತ್ತಿವೆ. ಶಾಸ್ತ್ರೀಯ ಹಿನ್ನೆಲೆಯ ಹಾಡುಗಳು ಗತಕಾಲವನ್ನು ನೆನಪಿಸುತ್ತಿವೆ.
ಹಾಗೆಂದು ರೆಹಮಾನ್ ಇಲ್ಲಿರುವ ಏಳೂ ಹಾಡುಗಳಿಗೆ ಕನ್ನಡದಲ್ಲೇ ಸಂಗೀತ ನೀಡಿದ್ದಾರೆ ಎಂದು ಭಾವಿಸಬೇಡಿ. ಬರೀ ಎರಡು ಹಾಡುಗಳಿಗೆ ಮಾತ್ರ ಸ್ವಂತ ಸಂಗೀತ. ಉಳಿದವು ತಮಿಳಿನ ಮೂಲ ಚಿತ್ರ 'ವರಲಾರು'ವಿನ ಎರವಲು.
ನಿರ್ಮಾಪಕ ಮಂಜು ಸೇಫ್...
'ಗಾಡ್‌ಫಾದರ್' ಚಿತ್ರದ ವಿತರಣೆ ಹಕ್ಕುಗಳು ಸಮರ್ಥ ವೆಂಚರ್ಸ್‌ನ ಪ್ರಸಾದ್ ಪಾಲಾಗಿವೆ. ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂಬ ವಿಚಾರ ಗೊತ್ತಾಗಿಲ್ಲ. ಅಂತೂ ಇದರಿಂದಾಗಿ ಚಿತ್ರ ಸೋತರೂ ನಿರ್ಮಾಪಕ ಮಂಜು ಅವರಿಗೆ ನಷ್ಟವಾಗುವುದಿಲ್ಲ. ಅವರು ಸುರಕ್ಷಿತ ವಲಯ ಸೇರಿಕೊಂಡಿದ್ದಾರೆ.
'ಗಾಡ್‌ಫಾದರ್' ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಪ್ರಸಾದ್, ಆಡಿಯೋ ಸೀಡಿಗಳನ್ನು ಉಚಿತವಾಗಿ ಹಂಚಲು ನಿರ್ಧರಿಸಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳ ಕಾಲ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಹಾಡುಗಳ ಆಡಿಯೋ ಸಿಡಿಗಳನ್ನು ಎಲ್ಲಾ ಪ್ರೇಕ್ಷಕರಿಗೂ ನೀಡಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
No comments:
Post a Comment