ಹೌದು, 'ಜೋಗಯ್ಯ' ಸೋಲಿನ ನಂತರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮುಖವನ್ನು ಅವರ ಅಭಿಮಾನಿಗಳು ಬೆಳ್ಳಿತೆರೆ ಮೇಲೆ ನೋಡಿಲ್ಲ. ವರಮಹಾಲಕ್ಷ್ಮಿ ಹಬ್ಬದ ದಿನ ಖಂಡಿತಾ ದರ್ಶನ ಸಿಗುತ್ತೆ ಅಂತ ಕಾಯುತ್ತಿದ್ದವರಿಗೆ ಶಿವಣ್ಣ ನಿರಾಸೆ ಮಾಡಿದ್ದಾರೆ. ಅವರು ನಾಯಕನಾಗಿರುವ ಬಹುನಿರೀಕ್ಷಿತ 'ಶಿವ' ಬಿಡುಗಡೆ ಮುಂದಕ್ಕೆ ಹೋಗಿದೆ, ಆ ಜಾಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ 'ಗಾಡ್‌ಫಾದರ್' ಬಂದಿದೆ.
ಅಂದರೆ, ಜುಲೈ 27ರ ಶುಕ್ರವಾರ 'ಶಿವ' ಬಿಡುಗಡೆಯಾಗುತ್ತಿಲ್ಲ. ಅಂದು 'ಗಾಡ್‌ಫಾದರ್' ತೆರೆಗೆ ಬರುತ್ತಿದೆ.
ಓಂ ಪ್ರಕಾಶ್ ರಾವ್ ನಿರ್ದೇಶನದ, ರಾಗಿಣಿ ದ್ವಿವೇದಿ ನಾಯಕಿಯಾಗಿರುವ 'ಶಿವ' ಚಿತ್ರ ಇದ್ದಕ್ಕಿದ್ದಂತೆ ಮುಂದಕ್ಕೆ ಹೋಗಲು ಕಾರಣವೇನೆಂಬುದು ಗೊತ್ತಾಗಿಲ್ಲ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಇನ್ನೂ ಎರಡರಿಂದ ನಾಲ್ಕು ವಾರ ಈ ಚಿತ್ರ ಬಿಡುಗಡೆಯಾಗುತ್ತಿಲ್ಲ. ಅದರ ನಂತರವಷ್ಟೇ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಯೋಚಿಸುತ್ತಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.
ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದನ್ನು ಅರಿತುಕೊಂಡಿರುವ ನಿರ್ಮಾಪಕರು, ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದ್ದಾರಂತೆ. ಅಭಿಮಾನಿಗಳನ್ನು ಕರೆಸಿಕೊಂಡು ಸಮಾಧಾನ ಮಾಡಲಿದ್ದಾರಂತೆ. ಬಿಡುಗಡೆಗೆ ಇರುವ ಅಡ್ಡಿ ಆತಂಕಗಳನ್ನು ಅರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಿದ್ದಾರಂತೆ.

'ಶಿವ' ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡಿರುವ ನಿರ್ಮಾಪಕ ಕೆ. ಮಂಜು ತನ್ನ 'ಗಾಡ್‌ಫಾದರ್' ಚಿತ್ರಕ್ಕೆ ಬಿಡುಗಡೆ ಭಾಗ್ಯ ಕರುಣಿಸುತ್ತಿದ್ದಾರೆ. 'ಕಠಾರಿ ವೀರ ಸುರಸುಂದರಾಂಗಿ' ಚಿತ್ರ ಬಿಡುಗಡೆಯಾದಾಗಲೇ ಸಾಕಷ್ಟು ಗಲಾಟೆ ಮಾಡಿಕೊಂಡಿದ್ದ ಮಂಜು, ಈಗ ರೆಡಿಯಾಗಿದ್ದಾರೆ.
ಶಿವ' ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡಿರುವ ನಿರ್ಮಾಪಕ ಕೆ. ಮಂಜು ತನ್ನ 'ಗಾಡ್‌ಫಾದರ್' ಚಿತ್ರಕ್ಕೆ ಬಿಡುಗಡೆ ಭಾಗ್ಯ ಕರುಣಿಸುತ್ತಿದ್ದಾರೆ. 'ಕಠಾರಿ ವೀರ ಸುರಸುಂದರಾಂಗಿ' ಚಿತ್ರ ಬಿಡುಗಡೆಯಾದಾಗಲೇ ಸಾಕಷ್ಟು ಗಲಾಟೆ ಮಾಡಿಕೊಂಡಿದ್ದ ಮಂಜು, ಈಗ ರೆಡಿಯಾಗಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ದಿನ 'ಗಾಡ್‌ಫಾದರ್' ಬಿಡುಗಡೆಯಾಗುತ್ತಿದೆ. ಈಗಿನಿಂದಲೇ ಬಿಡುಗಡೆ ಪೂರ್ವ ಪ್ರಚಾರ ಶುರು ಮಾಡುತ್ತಿದ್ದೇವೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಸೇತು ಶ್ರೀರಾಮ್ ನಿರ್ದೇಶನದ 'ಗಾಡ್‌ಫಾದರ್'ನಲ್ಲಿ ಉಪ್ಪಿಯದ್ದು ಮೂರು ವಿಭಿನ್ನ ಪಾತ್ರ. ಜಯಮಾಲ ಪುತ್ರಿ ಸೌಂದರ್ಯ ಇಲ್ಲಿ ಉಪ್ಪಿಗೆ ನಾಯಕಿ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸ್ವತಃ ಸಂಗೀತ ನೀಡಿರುವುದು ವಿಶೇಷ. ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ನಿರ್ಮಾಪಕಲ್ಲಿದೆ.
No comments:
Post a Comment