ದಕ್ಷಿಣ ಭಾರತದ ಜನಪ್ರಿಯ ನಟಿ ತಾಪಸಿ ಪನ್ನು ಕನ್ನಡಕ್ಕೆ ಬರ್ತಾರೆ, ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಅವರೇ ನಾಯಕಿ ಎಂಬ ಸುದ್ದಿಗಳಿದ್ದವು. ಆದರೆ ಅವನ್ನೆಲ್ಲ ಒಮ್ಮೆಗೇ ತಾಪಸಿ ಠುಸ್ ಮಾಡಿದ್ದಾರೆ. ನನಗೆ ಸಂಗತಿಯೇ ಗೊತ್ತಿಲ್ಲ, ಕನ್ನಡದಲ್ಲಿ ನಟಿಸೋವಷ್ಟು ಪುರುಸೊತ್ತು ನನಗಿಲ್ಲ ಎಂದು ಧಿಮಾಕಿನಿಂದ ಉತ್ತರಿಸಿದ್ದಾರೆ.
ಅಲ್ಲಿಗೆ ಅಪ್ಸರೆಯಂತಹ ಹುಡುಗಿ ಉಪ್ಪಿಗೆ ನಾಯಕಿಯಾಗೋದಿಲ್ಲ ಅನ್ನೋದು ಖಾತ್ರಿಯಾಗಿದೆ.
ಹಾಗಿದ್ರೆ ಈ ಸುದ್ದಿ ಹುಟ್ಟಿದ್ದು ಹೇಗೆ? ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಂದ. ತಾಪಸಿಯ ಜತೆ ಮಾತುಕತೆಯನ್ನೂ ನಡೆಸದೆ, ಆಕೆ ನಟಿಸುತ್ತಾರೋ ಇಲ್ಲವೋ ಅನ್ನೋದನ್ನೂ ಕೇಳದೆ ನಿರ್ದೇಶಕರು ಹೀಗಂದಿದ್ದರು. ವಾಸ್ತವದಲ್ಲಿ ತಾಪಸಿಯೇ ನಮ್ಮ ಚಿತ್ರದಲ್ಲಿ ನಾಯಕಿ ಎಂದು ನಿರ್ದೇಶಕರು ಹೇಳಿರಲಿಲ್ಲ. ತಾಪಸಿ ಆಗುವ ಸಾಧ್ಯತೆಗಳಿವೆ ಎಂದಷ್ಟೇ ಮಾಹಿತಿ ನೀಡಿದ್ದರು.
ತಾಪಸಿ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ಗಿಂತ ತಮಿಳಿನಲ್ಲೇ ಜೋರಾಗಿತ್ತು. ಇದು ಕಿವಿಗೆ ಬೀಳುತ್ತಿದ್ದಂತೆ ತಾಪಸಿ ಹೀಗೆಂದು ಪ್ರತಿಕ್ರಿಯಿಸಿದ್ದಾರೆ:
"ನನ್ನ ಸ್ಯಾಂಡಲ್‌ವುಡ್ ಪದಾರ್ಪಣೆ ಬಗ್ಗೆ ಸುದ್ದಿ ಕೇಳುತ್ತಿದ್ದೇನೆ. ನಿಜ ಏನೆಂದರೆ, ನಾನು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳಲ್ಲೇ ತುಂಬಾ ಬ್ಯುಸಿಯಾಗಿದ್ದೇನೆ. ಸದ್ಯ ನನ್ನಲ್ಲಿ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುವಷ್ಟು ಸಮಯವೇ ಇಲ್ಲ"
ಉಪೇಂದ್ರ ಅಥವಾ ಓಂ ಪ್ರಕಾಶ್ ರಾವ್ ಅವರಲ್ಲಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದಾರಾ? ಹೀಗೆಂದು ಕೇಳಿದಾಗ, "ನಿಜ ಹೇಳಬೇಕಂದ್ರೆ, ನನ್ನನ್ನು ಸಂಪರ್ಕಿಸಿದ ಯಾವ ಹೀರೋಗಳು ಅಥವಾ ನಿರ್ದೇಶಕರ ಹೆಸರುಗಳೂ ನನಗೆ ನೆನಪಿಲ್ಲ. ಒಂದಂತೂ ಸತ್ಯ, ನನಗೆ ಕರ್ನಾಟಕದಿಂದ ಇತ್ತೀಚೆಗೆ ತುಂಬಾ ಆಫರುಗಳು ಬರುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಕನ್ನಡದಲ್ಲಿ ನಟಿಸುವುದು ಕಷ್ಟ" ಎಂದು ಕಾಲು ಕಿತ್ತರು.
ಓಂ ಪ್ರಕಾಶ್ ರಾವ್ ನಿರ್ದೇಶನದ ಜತೆ ನಿರ್ಮಾಣಕ್ಕೂ ಕೈ ಹಾಕಿರುವ 'ತ್ರಿವಿಕ್ರಮ'ದಿಂದ ತಾಪಸಿ ಕಳಚಿಕೊಂಡಿದ್ದಾರೆ. ಇನ್ನು ಆ ಜಾಗಕ್ಕೆ ಯಾರು ಬರುತ್ತಾರೋ ನೋಡಬೇಕು.

No comments:
Post a Comment