Tuesday, 22 May 2012

ಮಹಾಲಕ್ಷ್ಮಿ ಬಡಾವಣೆಯಲ್ಲಿ ಬೀದಿ ಜಗಳಕ್ಕಿಳಿದ ಉಪೇಂದ್ರ


 ನಗರದ ಮಹಾಲಕ್ಷ್ಮಿ ಬಡಾವಣೆಯ ಚನ್ನಮ್ಮನ ಕೆರೆ ಆಟದ ಬಯಲಿನಲ್ಲಿ ಉಪೇಂದ್ರ ಅವರ ಕೈಗೆ ಬ್ಯಾಟ್ ಕೊಟ್ಟು ಬೀದಿ ಜಗಳಕ್ಕೆ ನಿಲ್ಲಿಸಿದ್ದರು ನಿರ್ದೇಶಕರು.

ಕನ್ನಡ, ತಮಿಳು, ತೆಲುಗು ಹೀಗೆ 125ಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ರಾಮ್ ನಾರಾಯಣ್ ನಿರ್ದೇಶನದ ಕಲ್ಪನಾ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಅವರನ್ನು ನಿರ್ದೇಶಕರು ಬೀದಿಗಿಳಿಸಿದ್ದರು. ಈ ದೃಶ್ಯ ಚಿತ್ರದ ಇಂಟ್ರಡಕ್ಶನ್ ಸೀನ್.

ಟಾಕಿ ಪೋರ್ಷನ್ ಹೆಚ್ಚುಕಮ್ಮಿ ಮುಗಿದಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಆಗುವ ಹೊತ್ತಿಗೆ ಗಾಡ್ ಫಾದರ್ ಬಿಡುಗಡೆಯಾಗಿ ವಾರಗಳ ಮೇಲಾಗಿರುತ್ತದೆ. ಆಗ ನನ್ನ ಕಲ್ಪನಾ ಚಿತ್ರ ಬಿಡುಗಡೆಗೆ ಸಕಾಲ ಎನ್ನುತ್ತಾರೆ ನಿರ್ದೇಶಕ ರಾಮ್ ನಾರಾಯಣ್.

ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಲಕ್ಷ್ಮಿ ರೈಉಮಾಶ್ರೀ, ಶ್ರುತಿ, ಸಾಯಿಕುಮಾರ್, ಅಚ್ಯುತ್ ರಾವ್ ಮುಂತಾದವರಿದ್ದಾರೆ.

ಕಠಾರಿವೀರ ಸುರಸುಂದರಾಂಗಿ ಬಿಡುಗಡೆಯಾಗಿ ಉತ್ತಮ ಪ್ರದಶನ ಕಾಣುತ್ತಿದೆ. ಬರುವ ತಿಂಗಳು ಗಾಡ್ ಫಾದರ್ ತೆರೆ ಮೇಲೆ ಬರಲು ತಯಾರಾಗಿದೆ. ಅದರ ಬೆನ್ನ ಹಿಂದೆಯೇ ತೆರೆಕಾಣುವ ಚಿತ್ರ ಕಲ್ಪನಾ.

No comments:

Post a Comment