ಸಂಧಾನ ಸಭೆಯಲ್ಲಿ ನಿರ್ಧಾರವಾದಂತೆ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿಸಿದ್ದ ಮುನಿರತ್ನ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರವನ್ನು ಸ್ವಾಮೀಜಿಗಳಿಗೆ ಪ್ರದರ್ಶಿಸಿದ್ದಾರೆ. ಸಿನಿಮಾ ನೋಡಿದ ಸ್ವಾಮೀಜಿಗಳು, ಇನ್ನೂ ಎರಡು ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದಿದ್ದಾರೆ. ಇವೆಲ್ಲದರ ನಡುವೆ ದೃಶ್ಯಗಳಿಗೆ ಕತ್ತರಿ ಹಾಕದಂತೆ ದಲಿತ ರಕ್ಷಣಾ ವೇದಿಕೆಯು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ!
ದಲಿತ ರಕ್ಷಣಾ ವೇದಿಕೆಯು ನ್ಯಾಯಾಲಯದ ಮೊರೆ ಹೋಗುವುದರೊಂದಿಗೆ ಕಠಾರಿ ವೀರನಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ಇದು ಪರಿಹಾರ ಕಂಡ ನಂತರವಷ್ಟೇ ಸ್ವಾಮೀಜಿಗಳು ಸೂಚಿಸಿರುವ ದೃಶ್ಯ-ಸಂಭಾಷಣೆಗಳನ್ನು ತೆಗೆದು, ಚಿತ್ರ ಪ್ರದರ್ಶಿಸಬಹುದು.
ಸ್ವಾಮೀಜಿಗಳು ಮತ್ತು ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಂಧಾನದಂತೆ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದಲ್ಲಿನ ಹಿಂದೂ ದೇವತೆಗಳ ಆಕ್ಷೇಪಕಾರಿಯಾಗಿರುವ ಕೆಲವು ದೃಶ್ಯಗಳನ್ನು ತೆಗೆದು ಹಾಕಲು ನಿರ್ಮಾಪಕ ಮುನಿರತ್ನ ಮುಂದಾಗಿದ್ದರು. ಇದು ಗೊತ್ತಾಗುತ್ತಿದ್ದಂತೆ ದಲಿತ ರಕ್ಷಣಾ ವೇದಿಕೆಯು ಕೋರ್ಟ್ ಮೆಟ್ಟಿಲೇರಿದೆ.
ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಲಿತ ರಕ್ಷಣಾ ವೇದಿಕೆಯು ಪ್ರಕರಣ ದಾಖಲಿಸಿದೆ. ಪ್ರಕರಣ ಕೈಗೆತ್ತಿಕೊಂಡಿರುವ ಕೋರ್ಟ್, 'ಕಠಾರಿ ವೀರ..'ನ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದಂತೆ ನಿರ್ಮಾಪಕ ಮುನಿರತ್ನ ಅವರಿಗೆ ತಡೆಯಾಜ್ಞೆ ವಿಧಿಸಿದೆ.
ಇನ್ನೂ ಎರಡು ದೃಶ್ಯ ತೆಗೆಯಬೇಕು...

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಆರೋಪ ಎದುರಿಸಿ, ಭಾರೀ ವಿವಾದಕ್ಕೆ ಕಾರಣವಾಗಿದ್ದ ಚಿತ್ರದ ಪರಿಷ್ಕೃತ ಆವೃತ್ತಿಯನ್ನು ಹತ್ತಾರು ಸ್ವಾಮೀಜಿಗಳು ಜತೆಯಾಗಿ ನೋಡಿದ ನಂತರ ಇದೀಗ ಇನ್ನೂ ಎರಡು ದೃಶ್ಯಗಳನ್ನು ತೆಗೆಯುವಂತೆ ಸೂಚಿಸಿದ್ದಾರೆ.
ಪೇಜಾವರ ಶ್ರೀಗಳು, ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಸಲಹೆಯಂತೆ ತಾವು ಸಿನಿಮಾದಲ್ಲಿನ ಪೌರಾಣಿಕ ಭಾಗವನ್ನಷ್ಟೇ ನೋಡಿದ್ದೇವೆ. ನಮ್ಮ ಪ್ರಕಾರ, ಇನ್ನೂ ಎರಡು ದೃಶ್ಯಗಳನ್ನು ತೆಗೆಯಬೇಕು. ಈ ಹೋರಾಟ ಈ ಚಿತ್ರಕ್ಕೆ ಸೀಮಿತವಲ್ಲ, ಮುಂದೆ ಬರುವ ಎಲ್ಲಾ ಸಿನಿಮಾಗಳಿಗೂ ಎಚ್ಚರಿಕೆಯೂ ಹೌದು ಎಂದು ಸ್ವಾಮೀಜಿಗಳ ಪರ ಸಂತೋಷ್ ಗುರೂಜಿ ಹೇಳಿಕೆ ನೀಡಿದರು.
ಮತ್ತೂ ಕಾಯಬೇಕು...
ಈ ಹಿಂದೆ ನಡೆದ ಸಮಾಲೋಚನೆಯಲ್ಲಿ, ಸೋಮವಾರದಿಂದಲೇ ಪರಿಷ್ಕೃತ ಆವೃತ್ತಿಯನ್ನು ರಾಜ್ಯದಾದ್ಯಂತ ಪ್ರದರ್ಶಿಸಲಾಗುತ್ತದೆ ಎಂದು ಸ್ವಾಮೀಜಿಗಳಿಗೆ ಮುನಿರತ್ನ ಮಾತು ಕೊಟ್ಟಿದ್ದರು. ಆದರೆ ಈಗ ನಡೆದಿರುವ ಬೆಳವಣಿಗಳಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಲಿದೆ.
ಸಿನಿಮಾವೊಂದಕ್ಕೆ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿದ ನಂತರ, ಯಾವುದೇ ದೃಶ್ಯಗಳನ್ನು ಸೇರಿಸಲು ಅಥವಾ ತೆಗೆಯಲು ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆಯುವುದು ಅಗತ್ಯ. ಈಗ ಸ್ವಾಮೀಜಿಗಳ ಸೂಚನೆಯಂತೆ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಇನ್ನೂ ಎರಡು ದೃಶ್ಯಗಳಿಗೆ ಕತ್ತರಿ ಹಾಕಬೇಕು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಸದ್ಯ ಸೆನ್ಸಾರ್ ಮಂಡಳಿಗೆ ಹೋಗುವಂತಿಲ್ಲ. ನ್ಯಾಯಾಲಯ ಸೂಚನೆ ನೀಡಿದ ನಂತರವಷ್ಟೇ ಸೆನ್ಸಾರ್ ಆಗಲಿದೆ. ಹಾಗಾಗಿ ಆಕ್ಷೇಪಕಾರಿ ದೃಶ್ಯಗಳನ್ನು ತೆಗೆಯುವ ಪ್ರಕ್ರಿಯೆ ಇನ್ನೂ ಒಂದೆರಡು ದಿನ ತಡವಾಗಬಹುದು ಎಂದು ನಿರ್ಮಾಪಕರು ಹೇಳಿದ್ದಾರೆ.

No comments:
Post a Comment