ಅಲ್ಲಿ ಉಪ್ಪಿ, ಇಲ್ಲಿ ಅಪ್ಪು; ಅದು 3ಡಿ, ಇದು ಬಾಂಡ್; ಅಲ್ಲಿ ಸುರೇಶ್ ಕೃಷ್ಣ, ಇಲ್ಲಿ ಸೂರಿ, ಎರಡರಲ್ಲೂ ರಾಜ್‌ಕುಮಾರ್ ಚಿತ್ರದ ಹಳೆ ಹಾಡು, ಒಂದೇ ವಾರದಲ್ಲಿ ಆಡಿಯೋ ರಿಲೀಸ್, ಒಂದೇ ವಾರದಲ್ಲಿ ಹಾಡುಗಳ ಶೂಟಿಂಗ್‌ಗಾಗಿ ವಿದೇಶಕ್ಕೆ, ಒಬ್ಬರೇ ಸಂಗೀತ ನಿರ್ದೇಶಕರು, ಒಂದೇ ವಾರ ಎರಡೂ ಚಿತ್ರ ಬಿಡುಗಡೆ -- ಹೀಗೆ ಒಂದೇ ಎರಡೇ. ಇದು ಪವರ್ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪುನೀತ್ ರಾಜ್‌ಕುಮಾರ್ ನಡುವಿನ ಏಪ್ರಿಲ್ ಕೊನೆ ವಾರದ ಬಿಗ್ ಫೈಟ್ ಮುಖ್ಯಾಂಶಗಳು.
'ಅಣ್ಣಾ ಬಾಂಡ್' ಮತ್ತು 'ಕಠಾರಿ ವೀರ ಸುರಸುಂದರಾಂಗಿ' ಚಿತ್ರಗಳು ಕ್ರಮವಾಗಿ ಏಪ್ರಿಲ್ 26 ಮತ್ತು 27ರಂದು ರಾಜ್ಯದಾದ್ಯಂತ ಬಿಡುಗಡೆಯಾಗೋದು ಗ್ಯಾರಂಟಿ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ನೇರಾನೇರ ಫೈಟ್. ಇಬ್ಬರು ಸೂಪರ್ ಸ್ಟಾರುಗಳ ನಡುವಿನ ಕದನ. ಅಭಿಮಾನಿಗಳಂತೂ ಕುಕ್ಕರಗಾಲಿನಲ್ಲಿ ಕುಳಿತು ರಿಸಲ್ಟ್ ನಿರೀಕ್ಷಿಸುತ್ತಿದ್ದಾರೆ. ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ ನೀಡುವ ಅಗತ್ಯವಿದೆಯೇ ಎಂಬ ಪ್ರಶ್ನೆಗಳ ನಡುವೆಯೇ ವೇದಿಕೆ ಸಿದ್ಧವಾಗಿದೆ. ಈ ಚಿತ್ರಗಳ ಕೆಲವು ವಿಶೇಷತೆಗಳತ್ತ ಒಂದು ಪಕ್ಷಿನೋಟಕ್ಕೆ ನೀವು ಸಾಕ್ಷಿಯಾಗಿ, ಬನ್ನಿ.
ಒಂದು ಮುನಿ, ಇನ್ನೊಂದು ರಾಜ್..
ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ ನಿರ್ಮಾಪಕ. ಈ ಚಿತ್ರದ ವೆಚ್ಚವೇ 15 ಕೋಟಿ. ಇನ್ನೂ ಮಾರಾಟವಾಗಿಲ್ಲ. ಮಾರೋದಿಲ್ಲ ಅಂತ ಸ್ವತಃ ಮುನಿರತ್ನ ಹೇಳಿಕೊಂಡಿದ್ದಾರೆ. ಕಾರಣ, ಚಿತ್ರದ ಮೇಲಿನ ಭರವಸೆ.
'ಅಣ್ಣಾ ಬಾಂಡ್' ಚಿತ್ರವನ್ನು ನಿರ್ಮಿಸುತ್ತಿರುವುದು ರಾಜ್‌ಕುಮಾರ್ ಹೋಮ್ ಬ್ಯಾನರ್ ಪೂರ್ಣಿಮಾ ಎಂಟರ್‌ಪ್ರೈಸಸ್. ಪಾರ್ವತಮ್ಮ ರಾಜ್‌ಕುಮಾರ್ ಮಾರ್ಗದರ್ಶನದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು 10 ಕೋಟಿ ರೂಪಾಯಿ ವೆಚ್ಚದ ಈ ಚಿತ್ರದ ವಿತರಣೆ ಹಕ್ಕುಗಳು ಬರೋಬ್ಬರಿ 16 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಎಂದ ಸುದ್ದಿಯಿದೆ.
ಸೀನಿಯರ್ ವರ್ಸಸ್ ಜೂನಿಯರ್...
'ಕಠಾರಿ...' ಚಿತ್ರವನ್ನು ನಿರ್ದೇಶಿಸುತ್ತಿರುವುದು ಬಹುಭಾಷಾ-ಪರಭಾಷಾ ನಿರ್ದೇಶಕ ಸುರೇಶ್ ಕೃಷ್ಣ. ಅವರಿಗೆ ಕನ್ನಡ ಸಿನಿಮಾ ಹೊಸತೇನಲ್ಲ. ಹಾಗೆಂದು ತೀರಾ ಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆಯೂ ಇವರಿಗಿಲ್ಲ. ಆದರೆ ಜನಪ್ರಿಯ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ರಜನಿಕಾಂತ್, ವಿಷ್ಣುವರ್ಧನ್‌ರಂತಹ ಹೆಸರಾಂತರ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ.
ಸೂರಿ 'ಅಣ್ಣಾ ಬಾಂಡ್' ನಿರ್ದೇಶಕ. ದುನಿಯಾ, ಇಂತಿ ನಿನ್ನ ಪ್ರೀತಿಯ, ಜಂಗ್ಲಿ, ಜಾಕಿ ಮೂಲಕ ಟಾಪ್ ಡೈರೆಕ್ಟರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸೂರಿಯ ಬಣ್ಣದ ಬದುಕು ಕ್ರಿಯಾಶೀಲತೆಯಿಂದಲೇ ಗುರುತಿಸಿಕೊಳ್ಳುತ್ತಿದೆ. ಆಕ್ಷನ್ ಸಿನಿಮಾ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸೂರಿ ಗೆದ್ದಿಲ್ಲ, ಹೆಚ್ಚು ಪ್ರಯತ್ನವನ್ನೂ ಮಾಡಿಲ್ಲ. ಕನ್ನಡ ಬಿಟ್ಟು ಬೇರೆಡೆ ಕೈ ಕೆಸರು ಮಾಡಿಕೊಂಡಿಲ್ಲ.

ಒಂದು 3ಡಿ, ಇನ್ನೊಂದು ಬಾಂಡ್..
ಕನ್ನಡದ ಮೊತ್ತ ಮೊದಲ ಪೂರ್ಣ ಪ್ರಮಾಣದ 3ಡಿ ಚಿತ್ರ 'ಕಠಾರಿ ವೀರ ಸುರಸುಂದರಾಂಗಿ'. ಕನ್ನಡದ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಮೊದಲು ಎಂಬ ಹೆಗ್ಗಳಿಕೆಯೂ ಇದೆ. ಇದಕ್ಕೆ ಪ್ರಸ್ತುತ ಕಾಲಘಟ್ಟದ ಜತೆ ಪೌರಾಣಿಕ ಲಿಂಕ್ ಕೊಡಲಾಗಿದೆ.
ಅತ್ತ 'ಅಣ್ಣಾ ಬಾಂಡ್' ಕೂಡ ಕಡಿಮೆಯೇನಲ್ಲ. ಬಾಂಡ್ ಶೈಲಿಯ ಪಕ್ಕಾ ಲೋಕಲ್ ಸಿನಿಮಾ ಎಂಬ ಖ್ಯಾತಿ ಅದರದ್ದು. ಇಲ್ಲಿ ಹಾಲಿವುಡ್‌ನ ಬಾಂಡ್‌ನಂತೆ ಸದಾ ಗನ್ನು ಹಿಡಿದು ಪುನೀತ್ ಬೇಟೆಯಾಡೋದಿಲ್ಲ. ಬದಲಿಗೆ ಬಾಂಡ್‌ನಂತೆ ಆಪತ್ ರಕ್ಷಕ. ಪಕ್ಕಾ ಆಕ್ಷನ್, ಸ್ಟೈಲಿಶ್ ಸಿನಿಮಾ.

ಒಂದೇ ವಾರ ಆಡಿಯೋ...
ಎಲ್ಲದರಲ್ಲೂ ಪೈಪೋಟಿ ನೀಡುತ್ತಿರುವ, ಈ ಎರಡು ಚಿತ್ರಗಳು ಆಡಿಯೋ ಬಿಡುಗಡೆಯನ್ನೂ ಬಿಟ್ಟಿಲ್ಲ. 'ಅಣ್ಣಾ ಬಾಂಡ್' ಆಡಿಯೋ ಏಪ್ರಿಲ್ ಎರಡರಂದು ಬಿಡುಗಡೆ. ಇದಾದ ಒಂದೆರಡು ದಿನಗಳಲ್ಲಿ 'ಕಠಾರಿ...' ಆಡಿಯೋ ರಿಲೀಸ್!
ಕನ್ನಡ ಚಿತ್ರರಂಗದ ಎರಡು ಪರಸ್ಪರ ಎದುರಾಳಿ ಆಡಿಯೋ ಕಂಪನಿಗಳಾದ ಆನಂದ್ ಮತ್ತು ಅಶ್ವಿನಿ ಆಡಿಯೋಗಳು ಈ ಎರಡು ಚಿತ್ರಗಳ ಆಡಿಯೋ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿವೆ.
ಕನ್ನಡ ಚಿತ್ರರಂಗದ ಎರಡು ಪರಸ್ಪರ ಎದುರಾಳಿ ಆಡಿಯೋ ಕಂಪನಿಗಳಾದ ಆನಂದ್ ಮತ್ತು ಅಶ್ವಿನಿ ಆಡಿಯೋಗಳು ಈ ಎರಡು ಚಿತ್ರಗಳ ಆಡಿಯೋ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿವೆ.
ಎರಡರಲ್ಲೂ ಹರಿಕೃಷ್ಣ...
ಕನ್ನಡದ ಟಾಪ್ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವ ತಾಕತ್ತು ಸದ್ಯಕ್ಕೆ ಯಾರಿಗೂ ಇದ್ದಂತಿಲ್ಲ. ವಿಶೇಷ ಅಂದ್ರೆ, ಒಂದೇ ವಾರ ಬಿಡುಗಡೆಯಾಗಲಿರುವ ಎರಡು ಅದ್ಧೂರಿ, ಟಾಪ್ ಸ್ಟಾರುಗಳ ಸಿನಿಮಾಗಳಿಗೆ ಹರಿಕೃಷ್ಣ ಸಂಗೀತ ನೀಡಿರುವುದು. ಇಂತಹ ಪರಿಸ್ಥಿತಿ ಹರಿಕೃಷ್ಣರಿಗೇನೂ ಹೊಸತಲ್ಲ, ಆದರೆ ಎರಡು ದೊಡ್ಡ ಚಿತ್ರಗಳಾಗಿರುವುದರಿಂದ ಕುತೂಹಲ ಕೊಂಚ ಜಾಸ್ತಿನೇ ಇದೆ.
ಎರಡೂ ಟೀಮ್ ವಿದೇಶಕ್ಕೆ..
ಈ ಎರಡೂ ಚಿತ್ರಗಳ ಒಂದೆರಡು ಹಾಡುಗಳ ಚಿತ್ರೀಕರಣ ಬಾಕಿಯಿವೆ. ಅದನ್ನು ಮುಗಿಸಲು ಎರಡೂ ಚಿತ್ರಗಳ ತಂಡ ವಿದೇಶಗಳಿಗೆ ಹೋಗುತ್ತಿದೆ. 'ಕಠಾರಿ..' ಟೀಮ್ ಏಪ್ರಿಲ್ 2ರಂದು ಜೋರ್ಡಾನ್‌ಗೆ ಹೋಗಲಿದ್ದರೆ, ಏಪ್ರಿಲ್ 6ರಂದು 'ಅಣ್ಣಾ ಬಾಂಡ್' ಜರ್ಮನಿಗೆ ಹಾರುತ್ತಿದೆ.
ಅಂದು ಭಟ್ರು, ಇಂದು ಕಿಚ್ಚ...
ಉಪ್ಪಿ ನಿರ್ದೇಶನದ 'ಸೂಪರ್' ಚಿತ್ರದ ಆರಂಭದಲ್ಲಿ ವಿಶಿಷ್ಟ ದನಿಯೊಂದನ್ನು ಬಳಸಲಾಗಿತ್ತು. ಅದು ಬೇರೆ ಯಾರೂ ಅಲ್ಲ, ನಿರ್ದೇಶಕ ಯೋಗರಾಜ್ ಭಟ್. ಭಾರತಾಂಬೆಗೆ ಆಗುತ್ತಿರುವ ಅನ್ಯಾಯವನ್ನು ವಿವರಿಸಲು ಭಟ್ಟರ ಗಡಸು ದನಿಯನ್ನು ಉಪ್ಪಿ ಬಳಸಿದ್ದರು. ಈಗ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ ಆರಂಭದಲ್ಲಿ ಅದೇ ರೀತಿ ಕಿಚ್ಚ ಸುದೀಪ್ ದನಿಯಿದೆ. ಸ್ವತಃ ಸುದೀಪ್ ಇಲ್ಲಿ ಕಂಠದಾನ ಮಾಡಿದ್ದಾರೆ.
ಓಲ್ಡ್ ಈಸ್ ಗೋಲ್ಡ್...
ಹೊಸ ಚಿತ್ರಗಳಲ್ಲಿ ಹಳೆಯ ಜನಪ್ರಿಯ ಹಾಡುಗಳು ಈಗೀಗ ಮಾಮೂಲಿ. ಆದರೆ ಒಂದೇ ವಾರ ಬಿಡುಗಡೆಯಾಗಲಿರುವ ಚಿತ್ರಗಳಲ್ಲಿ, ವರನಟ ಡಾ. ರಾಜ್‌ಕುಮಾರ್ ಚಿತ್ರದ ಎರಡು ಜನಪ್ರಿಯ ಹಾಡುಗಳನ್ನು ಬಳಸಿಕೊಂಡಿರುವುದು ಪೈಪೋಟಿಗೆ ಇನ್ನೊಂದು ವೇದಿಕೆ ಸೃಷ್ಟಿಸಿದೆ.
'ಕಠಾರಿ ವೀರ ಸುರಸುಂದರಾಂಗಿ' ಚಿತ್ರದಲ್ಲಿ 'ಬಹದ್ದೂರ್ ಗಂಡು' ಚಿತ್ರದ 'ಮುತ್ತಿನಂಥ ಮಾತೊಂದು ಗೊತ್ತೇನಮ್ಮ...' ಹಾಡನ್ನು ಬಳಸಿಕೊಳ್ಳಲಾಗಿದೆ. ಆದರೆ ಮೊದಲ ಸಾಲು ಮತ್ತು ಧಾಟಿ ಮಾತ್ರ ಮೂಲ ಚಿತ್ರದ್ದು. ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನುತ್ತಿದೆ ಕಠಾರಿ ಟೀಮ್.
ಅತ್ತ 'ಅಣ್ಣಾ ಬಾಂಡ್' ಚಿತ್ರದಲ್ಲಿ 'ಚಲಿಸುವ ಮೋಡಗಳು' ಚಿತ್ರದ ಹಾಡನ್ನು ಬಳಸಿಕೊಳ್ಳಲಾಗಿದೆ. ಸ್ವತಃ ಪುನೀತ್ ಹಾಡಿದ್ದ 'ಕಾಣದಂತೆ ಮಾಯವಾದನು ನಮ್ಮ ಶಿವ...' ಹಾಡು ಇಲ್ಲಿ ಸ್ಥಾನ ಪಡೆದುಕೊಂಡಿದೆ.

No comments:
Post a Comment