Saturday, 14 April 2012

ಕಠಾರಿವೀರ, ಗಾಡ್ ಫಾದರ್‌ಗೆ ಫಿಲಂ ಚೇಂಬರ್ ತೀರ್ಪು


ಚಲನಚಿತ್ರ ನಿರ್ಮಾಪಕರರಾದ ಮುನಿರತ್ನ ಹಾಗೂ ಕೆ ಮಂಜು ನಡುವಿನ ವಿವಾದಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಈ ಪರಿಹಾರ ನೀಡಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಅದೇನೆಂದರೆ ಯಾರ ಚಿತ್ರ ಮೊದಲು ಸೆನ್ಸಾರ್ ಸರ್ಟಿಫಿಕೇಟ್ ಪಡೆಯುತ್ತದೋ ಅವರ ಚಿತ್ರವೇ ಮೊದಲು ಬಿಡುಗಡೆಯಾಗಲಿ ಎಂದು ಫಿಲಂ ಚೇಂಬರ್ ತೀರ್ಪು ನೀಡಿದೆ.

ಮೊದಲು ಸೆನ್ಸಾರ್ ಆದ ಚಿತ್ರ ಮೊದಲು ಬಿಡುಗಡೆಯಾಗಲಿ. ನಂತರ ಸೆನ್ಸಾರ್ ಆದ ಚಿತ್ರ ನಾಲ್ಕು ವಾರಗಳ ಬಳಿಕ ಬಿಡುಗಡೆಯಾಗಲಿ ಎಂದಿದೆ ಫಿಲಂ ಚೇಂಬರ್. ಈ ಮೂಲಕ 'ಕಠಾರಿವೀರ ಸುರಸುಂದರಾಂಗಿ' ಹಾಗೂ 'ಗಾಡ್ ಫಾದರ್' ಚಿತ್ರಗಳ ವಿವಾದ ಸದ್ಯಕ್ಕೆ ತಣ್ಣಗಾಗಿದೆ. 

'ಕಠಾರಿವೀರ' ಚಿತ್ರದ ನಿರ್ಮಾಪಕ ಮುನಿರತ್ನ ಹಾಗೂ 'ಗಾಡ್ ಫಾದರ್' ಚಿತ್ರದ ಕೆ ಮಂಜು ಅವರು ತಮ್ಮ ಚಿತ್ರಗಳನ್ನು ಏ.27ರಂದೇ ಬಿಡುಗಡೆ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಉಪೇಂದ್ರ ಅಭಿನಯದ ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಅತ್ತ ನಿರ್ಮಾಪಕರಿಗೆ ನಷ್ಟ ಇತ್ತ ಪ್ರೇಕ್ಷಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.



No comments:

Post a Comment