ಐ ಡೋಂಟ್ ಲೈಕ್ ಇಟ್ ಕಾಂತಾ, ಐ ಡೋಂಟ್ ಲೈಕ್ ಇಟ್! -- ಹೀಗಂತ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಹೇಳ್ತಾರಾ? ಮೂಲಗಳ ಪ್ರಕಾರ ಹೌದು. ಅದೇ 'ರಕ್ತಕಣ್ಣೀರು' ಚಿತ್ರದ ಮೋಹನನ ಪಾತ್ರ ಮತ್ತೆ ನಿಮ್ಮೆದುರು ಕಾಣಿಸಿಕೊಳ್ಳಲಿದೆ. ಯಾವ ಚಿತ್ರದಲ್ಲಿ ಅಂತ ಗೊತ್ತೇ? ಕಠಾರಿ ವೀರ ಸುರಸುಂದರಾಂಗಿ!
ಅಂದ್ರೆ, 'ರಕ್ತಕಣ್ಣೀರು' ಚಿತ್ರದ ಮುಂದುವರಿದ ಭಾಗವೇ 'ಕಠಾರಿ ವೀರ ಸುರಸುಂದರಾಂಗಿ'? ಹಾಗಂತ ನೇರಾನೇರವಾಗಿ ಹೇಳಲು ಸಾಧ್ಯವಾಗದೇ ಇದ್ದರೂ, ಅಲ್ಲಿದ್ದ ಪಾತ್ರವೊಂದು ಈ ಚಿತ್ರದಲ್ಲೂ ಇರೋದು ಹೌದು. ಹಾಗಂತ ಹೆಚ್ಚು ಸುಳಿವು ಬಿಟ್ಟುಕೊಡದ ಚಿತ್ರ ನೋಡಿರುವ ಮಂದಿ ಹೇಳಿದ್ದಾರೆ.
ಸ್ವತಃ ಮುನಿರತ್ನ ಕೂಡ ಇಂತಹದ್ದೊಂದು ಸುಳಿವು ನೀಡಿದ್ದಾರೆ. ಉಪೇಂದ್ರ, ರಮ್ಯಾ, ಅಂಬರೀಷ್, ದೊಡ್ಡಣ್ಣರನ್ನು ಹೊರತುಪಡಿಸಿ 'ಕಠಾರಿ ವೀರ ಸುರಸುಂದರಾಂಗಿ'ಯಲ್ಲಿ ಇನ್ನೊಂದು ಮುಖ್ಯ ಪಾತ್ರವಿದೆ. ಅದೇನು ಅಂತ ಈಗಲೇ ಹೇಳಲಾರೆ. ಕಾದು ನೋಡಿ ಅಂತಾರೆ.
ಉಪ್ಪಿ ನಾಯಕನಾಗಿದ್ದ, ಸಾಧು ಕೋಕಿಲಾ ನಿರ್ದೇಶನದ 'ರಕ್ತಕಣ್ಣೀರು' 2003ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಕರ್ನಾಟಕ-ಆಂಧ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಉಪ್ಪಿಯ ವಿಶಿಷ್ಟ ಸಂಭಾಷಣೆಗಳು ಪಡ್ಡೆಗಳ ಬಾಯಲ್ಲಿ ನಲಿದಾಡಿದ್ದವು. ಅದರಲ್ಲೂ 'ಐ ಲೈಕ್ ಇಟ್ ಕಾಂತಾ.. ಐ ಲೈಕ್ ಇಟ್' ಅನ್ನೋ ಡೈಲಾಗಂತೂ ಈಗಲೂ ಜನಪ್ರಿಯ.
'ರಕ್ತಕಣ್ಣೀರು' ಚಿತ್ರದಲ್ಲಿರುವ ಪರಮ ಪಾಪಿ ಮೋಹನ (ಉಪೇಂದ್ರ) ಇಲ್ಲಿ ಸಾಯುತ್ತಾನೆ. ಆತನನ್ನು ಕಠಾರಿ ವೀರ (ಉಪೇಂದ್ರ) ನರಕದಲ್ಲಿ ಭೇಟಿ ಮಾಡುತ್ತಾನೆ. ಅವರಿಬ್ಬರ ನಡುವಿನ ಸನ್ನಿವೇಶಗಳು ಉಪ್ಪಿ ಅಭಿಮಾನಿಗಳಿಗೆ ಕಿಕ್ ಕೊಡುವಂತಿವೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ 'ಕಠಾರಿ..' ಟೀಮ್ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ. ಮೋಹನನ ಪಾತ್ರವನ್ನು ಇಲ್ಲೂ ಮುಂದುವರಿಸುತ್ತಿರುವ ಬಗ್ಗೆ ಮಾತೇ ಆಡುತ್ತಿಲ್ಲ. ಆದರೆ ಈ ಚಿತ್ರ ಕನ್ನಡದಲ್ಲೊಂದು ಮೈಲುಗಲ್ಲಾಗಲಿದೆ, ಇಂತಹ ಚಿತ್ರ ಬಂದೇ ಇಲ್ಲ ಎನ್ನುವಷ್ಟು ಅದ್ಭುತವಾಗಿದೆ ಎನ್ನುತ್ತಾರೆ.
'ರಕ್ತಕಣ್ಣೀರು' ಮೋಹನನ ಕೆಲವು ಡೈಲಾಗ್‌ಗಳು:

* ಕಲೆಗೆ ಬೆಲೆ ಕಟ್ಟುವ ಈ ತಲೆ ಇರುವವರೆಗೂ, ಶಿಲೆ ಕಾಣುವುದಲ್ಲದೆ, ತಲೆ ಎಲ್ಲಿ ಕಾಣುವುದು ಕಾಂತಾ? ಐ ಲೈಕ್ ಇಟ್ ಕಾಂತಾ, ಐ ಲೈಕ್ ಇಟ್!
* ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸ್, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸ್, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಳು, ಇನ್ನರ್ಧ ತಿಕ್ಳು ತಿಕ್ಳು..!
* ಈ ದೇಶದಲ್ಲಿ ಒಂದು ಹುಡುಗಿ ತನಗೆ ಇಷ್ಟ ಆಗಿರೋ ಡ್ರೆಸ್ ಹಾಕ್ಕೊಂಡು ಓಡಾಡೋಕೆ ಬಿಟ್ಟಿದ್ದೀರಾ ಮ್ಯಾನ್ ನೀವು ಬಿಟ್ಟಿದ್ದೀರಾ? ಒಂದು ಹುಡುಗ ಹುಡುಗಿ ಪಬ್ಲಿಕ್‌ನಲ್ಲಿ ಆರಾಮಾಗಿ ಎರಡು ಅವರ್ ಮಾತಾಡೋಕೆ ಬಿಟ್ಟಿದ್ದೀರಾ ಮ್ಯಾನ್ ಬಿಟ್ಟಿದ್ದೀರಾ? ಒಂದು ಹುಡುಗ ಹುಡುಗಿ ಒಬ್ಬರನ್ನೊಬ್ರು ಅರ್ಥ ಮಾಡ್ಕೊಂಡು ಮದುವೆ ಆಗೋದಿಕ್ಕೆ ಬಿಟ್ಟಿದ್ದೀರಾ ಮ್ಯಾನ್ ನೀವು ಬಿಟ್ಟಿದ್ದೀರಾ? ಅಪ್ಪ ಅಮ್ಮ ನೋಡಿದ ಹುಡುಗನ ಹುಡುಗಿ ಮದುವೆ ಆಗ್ಬೇಕು. ಇದು ನಿಮ್ಮ ಸಂಪ್ರದಾಯ. ಟ್ರೆಡೀಶನಲ್ ರೇಪಿಸ್ಟ್‌ಗಳು ಮಾಡ್ತಿರೋ ಫ್ಯಾಮಿಲಿ ಬಲಾತ್ಕಾರ, ಅರೇಂಜ್ಡ್ ಅತ್ಯಾಚಾರ!
* ನೀವು ಇಂಡಿಯನ್ಸೇ ಇಷ್ಟು. ರಾತ್ರಿಯೆಲ್ಲ ಅವನು ಇವಳ ಜತೆ ಏನು ಮಾಡ್ತಿದ್ದಾನೆ, ಇವಳು ಅವನ ಜತೆ ಏನೇ ಮಾಡ್ತಿದ್ದಾಳೆ ಅಂತ ಕನಸು ಕಟ್ಕೊಂಡು, ನಿಮ್ಮ ಅಮೂಲ್ಯವಾದ ರಾತ್ರಿಗಳನ್ನೆಲ್ಲ ವೇಸ್ಟ್ ಮಾಡ್ಕೊಂಬಿಡ್ತೀರಾ.. ಅಂದವಾದ ಹೆಣ್ಣು ಕಂಡ್ರೆ ನಿಮ್ಗೆಲ್ಲ ಹೊಟ್ಟೆ ಉರಿ, ಜೆಲಸಿ. ಹೆಣ್ಣು ತನ್ನ ಅಂದ ತೋರಿಸಿದ್ರೆ ಹೊಲಸು ಕಥೆ ಕಟ್ತೀರಾ. ಆ ಅಂದನಾ ಸವಿದ್ರೆ ಬಹಿಷ್ಕಾರ ಹಾಕ್ತೀರಾ.. ಇನ್ನು ಈ ದೇಶ ಅಂದವಾಗಿ ಹೇಗೆ ಕಾಣ್ಸುತ್ತೆ ಮ್ಯಾನ್.. ಹೇಗೆ ಕಾಣ್ಸುತ್ತೆ..?!
No comments:
Post a Comment