'ಕಠಾರಿ ವೀರ ಸುರಸುಂದರಾಂಗಿ' ಎಂಬ ಕನ್ನಡ ಸಿನಿಮಾ 3ಡಿಯಲ್ಲಿ ಬರುತ್ತಿದೆ ಅನ್ನೋದನ್ನು ಎಲ್ಲರೂ ಕೇಳಿರ್ತೀರಿ. ಆದ್ರೆ 3ಡಿ ಸಿನಿಮಾ ಅಂದ್ರೆ ಹೇಗಿರುತ್ತದೆ ಅನ್ನೋ ಕಲ್ಪನೆ ಎಲ್ಲರಿಗೂ ಗೊತ್ತಿರದು. ಕೆಲವೇ ಕೆಲವರಷ್ಟೇ ಈ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿರಬಹುದು ಅಥವಾ ಅಂತಹ ಸಿನಿಮಾವನ್ನು ನೋಡಿರಬಹುದು.
ಈಗ ನೀವೇ 'ಕಠಾರಿ ವೀರ ಸುರಸುಂದರಾಂಗಿ' ನೋಡುವುದಿದ್ದರೆ, ಆ ಚಿತ್ರದಲ್ಲಿ ಬಳಸಲಾಗಿರುವ ತಂತ್ರಜ್ಞಾನ ಹೇಗಿರುತ್ತದೆ ಎನ್ನುವುದು ಗೊತ್ತಿದ್ದರೆ ಚೆನ್ನಾಗಿರುತ್ತದೆ, ಅಲ್ವೇ? ಬನ್ನಿ, 3ಡಿ ಕುರಿತ ಕೆಲವು ಸಂಗತಿಗಳನ್ನು ನಾವಿಲ್ಲಿ ವಿವರಿಸುವ ಯತ್ನ ಮಾಡಿದ್ದೇವೆ. ಓದಿಕೊಳ್ಳಿ.

3ಡಿ ವಿಶೇಷತೆಗಳು...
3ಡಿ ಅಂದರೆ Three Dimensional. ಅಂದರೆ ಮೂರು ಆಯಾಮಗಳು. ಈ ತಂತ್ರಜ್ಞಾನದಲ್ಲಿ ತಯಾರಾದ ಸಿನಿಮಾವನ್ನು ನೋಡಬೇಕೆಂದರೆ ಕನ್ನಡಕ ಬೇಕೇ ಬೇಕು. ಕನ್ನಡಕವಿಲ್ಲದೆ ನಿಮಗೆ 3ಡಿ ಪರಿಣಾಮಗಳನ್ನು ನೋಡಲಾಗದು. ಈ ಕನ್ನಡಕದ ಒಂದು ಕಣ್ಣಿಗೆ ನೀಲಿ ಹಾಗೂ ಇನ್ನೊಂದು ಕಣ್ಣಿಗೆ ಕೆಂಪು ಬಣ್ಣದ 3ಡಿ ಹಾಳೆ ಅಥವಾ ಗ್ಲಾಸುಗಳನ್ನು ಜೋಡಿಸಿರಲಾಗುತ್ತದೆ.
ಈ ಕನ್ನಡಕವನ್ನು ಹಾಕಿಕೊಂಡರೆ, 3ಡಿ ಸಿನಿಮಾವನ್ನು ನೋಡಬಹುದು. ಹಾಗೆಂದು ಇದೇ ಕನ್ನಡಕ ಹಾಕಿಕೊಂಡು ಯಾವುದೇ ಮಾಮೂಲಿ ಸಿನಿಮಾ ನೋಡಿದರೆ, ಆಗ 3ಡಿ ಎಫೆಕ್ಟ್ ಸಿಗುವುದಿಲ್ಲ. ಟಿವಿಯಲ್ಲಿ ಕೂಡ 3ಡಿ ಸಿನಿಮಾ ನೋಡಲು ಸಾಧ್ಯವಿಲ್ಲ.
ಇನ್ನು 3ಡಿ ಸಿನಿಮಾದಲ್ಲಿ ಏನು ವಿಶೇಷತೆಗಳಿರುತ್ತವೆ ಅನ್ನೋದು. ಮೊದಲನೆಯದಾಗಿ ಈ ಚಿತ್ರಗಳು ವಾಸ್ತವತೆಗೆ ಹತ್ತಿರವಾಗಿರುತ್ತವೆ. ದೃಶ್ಯಗಳು ನಮ್ಮ ಕಣ್ಣಂಚಿನಲ್ಲೇ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ತೆರೆಯೊಳಗೆ ತೂರಿದಂತೆ, ಪಾತ್ರಗಳು ನಮ್ಮ ಮೇಲೆಯೇ ಎರಗಿದಂತೆ ಭಾಸವಾಗುತ್ತದೆ. ಹಾರರ್ ಚಿತ್ರಗಳಾದರೆ ಪ್ರೇಕ್ಷಕರು ಭೀತಿಗೊಳಗಾಗುವ ಸಾಧ್ಯತೆಗಳು ಹೆಚ್ಚು. ಶ್ರೀಮಂತ ದೃಶ್ಯಗಳ ಚಿತ್ರೀಕರಣವಿದ್ದರೆ, ಆಗ ಕಣ್ಣುಗಳಿಗೆ ಹಬ್ಬ. ಅಂತೂ 3ಡಿಯಿಂದ ರಿಯಾಲಿಟಿ ಅನುಭವ ಸಿಗೋದು ಗ್ಯಾರಂಟಿ.

ಕನ್ನಡದ ಮೊದಲ 3ಡಿ...
ಕನ್ನಡದ ಮೊದಲ 3ಡಿ ಸಿನಿಮಾ ಕೀರ್ತಿ 'ಕಠಾರಿ ವೀರ ಸುರಸುಂದರಾಂಗಿ'ಯದ್ದು. ಈ ಸಿನಿಮಾ ಪೂರ್ತಿ 3ಡಿ ಮತ್ತು 2ಡಿ ತಂತ್ರಜ್ಞಾನಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂದರೆ, ನಿಮ್ಮೂರಿನಲ್ಲಿ 3ಡಿ ತಂತ್ರಜ್ಞಾನದ ಥಿಯೇಟರ್ ಇದ್ದರೆ, ಅಲ್ಲಿ 3ಡಿಯೇ ಬಿಡುಗಡೆಯಾಗುತ್ತದೆ. ಇಲ್ಲದೇ ಇದ್ದರೆ, 2ಡಿ ಮಾತ್ರ.
ಚಿತ್ರಮಂದಿರದಲ್ಲೂ ಸಮಸ್ಯೆ...
2ಡಿ ಮತ್ತು 3ಡಿ ಚಿತ್ರಮಂದಿರಗಳಿಗೆ ತುಂಬಾನೇ ವ್ಯತ್ಯಾಸಗಳಿವೆ. 2ಡಿ ಚಿತ್ರವನ್ನಷ್ಟೇ ಪ್ರದರ್ಶಿಸುವ ಚಿತ್ರಮಂದಿರಗಳಲ್ಲಿ 3ಡಿ ಪ್ರದರ್ಶನ ಅಸಾಧ್ಯ. 3ಡಿ ಪ್ರದರ್ಶಿಸಲು ಬೇರೆಯದೇ ತಂತ್ರಜ್ಞಾನದ ಅಗತ್ಯವಿರುತ್ತದೆ. ಇದಕ್ಕೆ ತಗಲುವ ವೆಚ್ಚ ಸುಮಾರು 70ರಿಂದ 80 ಲಕ್ಷ ರೂಪಾಯಿ.
ಸಾಮಾನ್ಯ ಚಿತ್ರಮಂದಿರಗಳಲ್ಲಿರುವ ಬಿಳಿ ಪರದೆಯ ಮೇಲೆ 3ಡಿ ಚಿತ್ರವನ್ನು ನೋಡಲಾಗದು. ಅದಕ್ಕೆ ಸಿಲ್ವರ್ ಪರದೆ ಬೇಕು. ವಿಶೇಷ ಹೆಚ್ಚುವರಿ ಪ್ರೊಜೆಕ್ಟರ್ ಕೂಡ ಬೇಕು. ಇಷ್ಟಾದ ಮೇಲೆ ದುಬಾರಿ 3ಡಿ ಗ್ಲಾಸುಗಳ ಅಗತ್ಯವಿರುತ್ತದೆ. ಇಂದಿನ ದರದಲ್ಲಿ ಒಂದು ಕನ್ನಡಕದ ಬೆಲೆ ಸುಮಾರು 300 ರೂಪಾಯಿ.

ಹೇಗೆ ತೋರಿಸುತ್ತಾರೆ 3ಡಿ?
ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕಠಾರಿ ವೀರ ಸುರಸುಂದರಾಂಗಿ'ಯನ್ನು 3ಡಿಯಲ್ಲಿ ತೋರಿಸುತ್ತೇನೆ ಎಂದಿದ್ದಾರೆ ನಿರ್ಮಾಪಕ ಮುನಿರತ್ನ. ಆದರೆ ಇಷ್ಟೊಂದು ಖರ್ಚು ಮಾಡಿ ಅದೆಲ್ಲ ಸಾಧ್ಯವಿದೆಯೇ? ಯಾಕಿಲ್ಲ ಅಂತಾರೆ ಮುನಿರತ್ನ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದೇನೆ. ಒಮ್ಮೆ ಬಳಸಿ ಎಸೆಯುವ ಕನ್ನಡಕಗಳ ಖರೀದಿಗೆ ನಿರ್ಧರಿಸಿದ್ದೇನೆ.
ಪ್ರಸಕ್ತ ಬೆಂಗಳೂರು, ಮೈಸೂರು ಮತ್ತು ಮಂಗಳೂರುಗಳಲ್ಲಿ ಮಾತ್ರ 3ಡಿ ಸೌಲಭ್ಯವಿರುವ ಚಿತ್ರಮಂದಿರಗಳಿವೆ. ತುಮಕೂರು, ಹಾಸನ ಮತ್ತು ಮಂಡ್ಯಗಳಂತಹ ಕೇಂದ್ರಗಳಿಗೂ 3ಡಿ ತಂತ್ರಜ್ಞಾನ ತರಲು ಯತ್ನಿಸುತ್ತಿದ್ದೇನೆ. ಖಂಡಿತಾ ಇದರಲ್ಲಿ ಯಶಸ್ವಿಯಾಗುತ್ತೇನೆ ಎನ್ನುತ್ತಾರವರು.

ಬಾಲಿವುಡ್ಡಲ್ಲಿ 3ಡಿ ಮಾಮೂಲಿ...
ಕನ್ನಡದ ಮಟ್ಟಿಗೆ 3ಡಿ ಹೊಸದು. ಆದರೆ ಬಾಲಿವುಡ್‌ನಲ್ಲಿ 3ಡಿಗಳದ್ದೇ ಅಬ್ಬರ. ಶಾರೂಖ್ ಖಾನ್ ನಾಯಕರಾಗಿದ್ದ 'ರಾ.ವನ್' ಮತ್ತು 'ಡಾನ್ 2' ಚಿತ್ರಗಳು 3ಡಿ ಆವೃತ್ತಿಯಲ್ಲೂ ಬಿಡುಗಡೆಯಾಗಿದ್ದವು. ಅದಕ್ಕೂ ಮೊದಲು 'ಹಾಂಟೆಡ್' ಎಂಬ ಹಾರರ್ ಚಿತ್ರ 3ಡಿಯಲ್ಲಿ ರಿಲೀಸ್ ಆಗಿತ್ತು. ಅತ್ತ ತಮಿಳಿನಲ್ಲಿ 'ಅಂಬುಲಿ' ಎಂಬ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಸುದ್ದಿ ಮಾಡಿತ್ತು.
ಈಗ ಕ್ರಿಶ್ 3, ರಾಜ್ 3, ಡೇಂಜರಸ್ ಇಷ್ಕ್, ಜೋಕರ್ ಮುಂತಾದ ಬಾಲಿವುಡ್ ಚಿತ್ರಗಳು 3ಡಿ ತಂತ್ರಜ್ಞಾನದಲ್ಲೇ ಸಿದ್ಧವಾಗುತ್ತಿವೆ.
ಆದರೆ ಭಾರತದಲ್ಲಿ 3ಡಿ ತಂತ್ರಜ್ಞಾನದ ಕಿರೀಟ ಮಲಯಾಳಂ ಚಿತ್ರರಂಗಕ್ಕೆ ಸಲ್ಲುತ್ತದೆ. ನಾವು ಈಗಷ್ಟೇ ಬಳಸುತ್ತಿರುವ 3ಡಿ ತಂತ್ರಜ್ಞಾನವನ್ನು ಮಲಯಾಳಿಗಳು 1984ರಲ್ಲೇ ಬಳಸಿದ್ದರು. ಜಿಜೊ ಪುನ್ನೋಸ್ ನಿರ್ದೇಶನದ 'ಮೈ ಡಿಯರ್ ಕುಟ್ಟಿಚ್ಚಾತನ್' ಚಿತ್ರ ಭಾರತದಲ್ಲೇ ಮೊತ್ತ ಮೊದಲ 3ಡಿ ಸಿನಿಮಾ. ಇದೇ ಚಿತ್ರ ಹಿಂದಿಯಲ್ಲಿ 'ಛೋಟಾ ಚೇತನ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ಈಗ ಕನ್ನಡದ ಸರದಿ. ಉಪೇಂದ್ರ, ರಮ್ಯಾ, ಅಂಬರೀಷ್ ಪ್ರಮುಖ ಪಾತ್ರಗಳಲ್ಲಿರುವ ದುಬಾರಿ ವೆಚ್ಚದ 3ಡಿ ಸಿನಿಮಾಕ್ಕೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

No comments:
Post a Comment