Saturday, 31 March 2012

ಉಪೇಂದ್ರ ಕಠಾರಿವೀರ ಚಿತ್ರದಲ್ಲಿ ಅಣ್ಣಾವ್ರ ಸಾಂಗ್


ಹಳೆಯ ಜನಪ್ರಿಯ ಹಾಡುಗಳನ್ನು ಹೊಸ ಚಿತ್ರಗಳಲ್ಲಿ ಬಳಸಿಕೊಳ್ಳುವ ಪರಿಪಾಠ ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. 'ಅಣ್ಣಾಬಾಂಡ್' ಚಿತ್ರದಲ್ಲಿ ಅಣ್ಣಾವ್ರ 'ಚಲಿಸುವ ಮೋಡಗಳು' ಚಿತ್ರದ "ಕಾಣದಂತೆ ಮಾಯವಾದನು ನಮ್ಮ ಶಿವ..." ಎಂಬ ಹಾಡನ್ನು ಬಳಸಿಕೊಂಡಿರುವುದನ್ನು ಕೇಳಿಯೇ ಇರುತ್ತೀರಿ. 

ಈಗ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲೂ ವರನಟ ಡಾ.ರಾಜ್ ಕುಮಾರ್ ಅವರ 'ಬಹದ್ದೂರ್ ಗಂಡು' ಚಿತ್ರದ "ಮುತ್ತಿನಂಥ ಮಾತೊಂದು ಗೊತ್ತೇನಮ್ಮ.." ಹಾಡನ್ನು ಬಳಸಿಕೊಳ್ಳಲಾಗಿದೆ.

ವಿಶೇಷ ಎಂದರೆ 'ಅಣ್ಣಾಬಾಂಡ್' ಹಾಗೂ 'ಕಠಾರಿವೀರ' ಚಿತ್ರಗಳಿಗೆ ಸಂಗೀತ ನೀಡಿರುವವರು ವಿ ಹರಿಕೃಷ್ಣ. 'ಕಠಾರಿವೀರ' ಆಡಿಯೋ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು 'ಅಣ್ಣಾಬಾಂಡ್' ಧ್ವನಿಮುದ್ರಿಕೆಗಳು ಏಪ್ರಿಲ್ 2ರಂದು ಕೇಳುಗರ ಕೈ ಸೇರಲಿವೆ. 

No comments:

Post a Comment