Wednesday, 14 March 2012

ಕಠಾರಿವೀರ ಉಪೇಂದ್ರ ಜೊತೆ ರಿಷಿಕಾ ಸಿಂಗ್ ಡಾನ್ಸ್


'ಯಾರಾದ್ರೆ ನಂಗೇನು' ಚಿತ್ರದ ಅರೆಬೆತ್ತಲೆ ಪೋಸ್ಟರ್ ವಿವಾದದಲ್ಲಿ ಪ್ರಚಾರಪಡೆದಿದ್ದ ನಟಿ ರಿಷಿಕಾ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾದದ್ದು ಸೂಪರ್ ಸ್ಟಾರ್ ಉಪೇಂದ್ರ ಜೊತೆ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ. ಉಪೇಂದ್ರ, ರಮ್ಯಾ ಜೋಡಿಯ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ 3D ಹಾಡೊಂದರಲ್ಲಿ ಮೂವರ ನಟಿಯರ ಜೊತೆ ರಿಷಿಕಾ ಕೂಡ ಕಾಣಿಸಿಕೊಳ್ಳಲಿದ್ದಾರೆ. 

ಈ ಅವಕಾಶದಿಂದ ರಿಷಿಕಾ ಸಖತ್ ಖುಷಿಯಾಗಿದ್ದಾರೆ. ಕಾರಣ, ಸ್ವತಃ ಉಪೇಂದ್ರರೇ ಆ ಹಾಡಿಗೆ ರಿಷಿಕಾರೇ ಬೇಕೆಂದು ಹೇಳಿದ್ದಾರಂತೆ. ಈ ವಿಷಯವನ್ನೂ ಕೂಡ ರಿಷಿಕಾರೇ ಮಾಧ್ಯಮಕ್ಕೆ ಹೇಳಿದ್ದಾರೆ. ರಿಷಿಕಾ ಸಿಂಗ್‌ ರನ್ನು ಉಪ್ಪಿ ಇಷ್ಟೊಂದು ಮೆಚ್ಚಿಕೊಳ್ಳಲು ಕಾರಣ, 'ಕಳ್ಳ ಮಳ್ಳ ಸುಳ್ಳ' ಚಿತ್ರದ ಹಾಡಲ್ಲಿ ರಿಷಿಕಾ ಡಾನ್ಸ್. ಕಠಾರಿವೀರದಲ್ಲಿ ಕುಣಿಯಲಿರುವ ಇನ್ನಿಬ್ಬರು ನಟಿಯರು ರಮಣೀತೋ ಚೌದರಿ ಮತ್ತು ಸುಮನ್ ರಂಗನಾಥ್. 

ಬರೀ ಒಂದು ಹಾಡಲಷ್ಟೇ ಎಂಬ ಬೇಸರ ರಿಷಿಕಾಗಿಲ್ಲವಂತೆ. ಕಾರಣ, ಉಪ್ಪಿ ಜತೆ ಕಾಣಿಸಿಕೊಳ್ಳುವ ಅವಕಾಶ ಸಿಕ್ತಲ್ಲ, ಮುಂದೆ ನಾಯಕಿಯಾಗಿ ಉಪ್ಪಿ ಜತೆ ನಟಿಸುತ್ತೇನೆ ಅಂತಾರೆ ರಿಷಿಕಾ. ಇದನ್ನು 'ಐಟಂ ಸಾಂಗ್' ಎನ್ನಲು ನಿರಾಕರಿಸಿರುವ ರಿಷಿಕಾ, 'ಸಾಂದರ್ಭಿಕ ಹಾಡು' ಎಂಬ ಹೊಸ ಹೆಸರು ನೀಡಿದ್ದಾರೆ. ರಮಣಿತು ಚೌಧರಿಯದು ಕೂಡ ಇದೇ ಅಭಿಪ್ರಾಯ. ಆದರೆ ಸುಮನ್ ರಂಗನಾಥ್ ಮಾತ್ರ ಇದು 'ಚಿತ್ರಾನ್ನ ಐಟಂ ಸಾಂಗ್'ನಂತೆ ಇನ್ನೊಂದು ಹಿಟ್ ಆಗಬಹುದು ಎಂದಿದ್ದಾರೆ. 

No comments:

Post a Comment