Thursday, 16 February 2012

ಸಾಫ್ಟ್‌ವೇರ್ ಕೆಲಸ ಹುಡುಕುತ್ತಾ ಅಮೆರಿಕಾಗೆ ಉಪೇಂದ್ರ


ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಫ್ಟ್‌ವೇರ್ ಕೆಲಸ ಹುಡುಕುತ್ತಾ ಅಮೆರಿಕಾ ಅಥವಾ ಯೂರೋಪ್ ರಾಷ್ಟ್ರಗಳಿಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮಹತ್ವವಾದದ್ದನ್ನು ಸಾಧಿಸಲು ಅವರು ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಗಿದ್ದರೆ ಕನ್ನಡ ಚಿತ್ರರಂಗಕ್ಕೆ ಅವರು ಗುಡ್ ಬೈ ಹೇಳ್ತಾರಾ?

ಎಲ್ಲಾದರೂ ಉಂಟೇ? ಅವರು ಹೀಗೆ ಅಮೆರಿಕಾ, ಯೂರೋಪ್‌ಗೆ ಹೊರಡುತ್ತಿರುವುದು ಅವರ ಮುಂದಿನ ಚಿತ್ರಕ್ಕಾಗಿಯೇ! ಈ ಚಿತ್ರದಲ್ಲಿ ಉಪ್ಪಿ ಅವರದು ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರ. ಕೆಲಸ ಹುಡುಕುತ್ತಾ ಅವರು ವಿದೇಶಕ್ಕೆ ಹಾರುತ್ತಾರೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕತೆ. 

ಇದಿಷ್ಟು ಸಣ್ಣ ಎಳೆಯನ್ನು ನಿರ್ಮಾಪಕ ಅಣಜಿ ನಾಗರಾಜ್ ಬಿಟ್ಟುಕೊಟ್ಟಿದ್ದಾರೆ. ಚಿತ್ರದ ಹೆಸರು 'ಲಂಡನ್ ಗೌಡ'. ಈ ಚಿತ್ರದ ಶೇ.70ರಷ್ಟು ಚಿತ್ರೀಕರಣ ಅಮೆರಿಕಾ ಅಥವಾ ಯೂರೋಪ್‌ನಲ್ಲಿ ಚಿತ್ರಿಸಲು ಉದ್ದೇಶಿಸಲಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ಹಾಸ್ಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

No comments:

Post a Comment