'ಓಂ' ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ದೊಡ್ಡದೊಂದು ಬ್ರೇಕ್ ಕೊಟ್ಟಿದ್ದ ರಿಯಲ್ ಸ್ಟಾರ್ ಉಪೇಂದ್ರ, ಶಿವಣ್ಣ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ವರದಿಗಳನ್ನು ಸ್ವತಃ ಉಪ್ಪಿ ತಳ್ಳಿ ಹಾಕಿದ್ದಾರೆ.
ಚಿತ್ರ ನಿರ್ದೇಶಿಸುವುದು ಬಿಡಿ, ಅಂತಹ ಪ್ರಸ್ತಾವನೆಯೂ ಬಂದಿಲ್ಲ. ಎಲ್ಲವೂ ಗಾಳಿಸುದ್ದಿ ಅಂತ ಉಪ್ಪಿ ಸ್ಪಷ್ಟಪಡಿಸಿದ್ದಾರೆ.
ಉಪ್ಪಿ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ನಾಯಕರಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಶ್ರೀಮುತ್ತು ಪ್ರೊಡಕ್ಷನ್ ಅಡಿಯಲ್ಲಿ ಸ್ವತಃ ಶಿವಣ್ಣ ನಿರ್ಮಿಸಲಿದ್ದಾರೆ. ಈ ಸಂಬಂಧ ಉಪ್ಪಿ ಜತೆ ಸಮಾಲೋಚನೆ ಕೂಡ ಮುಗಿದಿದೆ ಎಂದು ಹೇಳಲಾಗಿತ್ತು. ಆದರೆ ಅದೆಲ್ಲವೂ ಸುಳ್ಳು, ಉಪ್ಪಿ ಜತೆ ಪ್ರಸ್ತಾವಿತ ಚಿತ್ರದ ಬಗ್ಗೆ ಶಿವಣ್ಣ ಚರ್ಚೆ ನಡೆಸಿಯೇ ಇಲ್ಲ ಅನ್ನೋದು ಬಯಲಾಗಿದೆ.
ಆದರೆ ತನ್ನದೇ ನಿರ್ದೇಶನ ಮತ್ತು ನಿರ್ಮಾಣದ ಚಿತ್ರವೊಂದರ ಕಥೆಯ ಸಿದ್ಧತೆಯಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ ಉಪ್ಪಿ.
"ಸ್ಕ್ರಿಪ್ಟ್ ರೆಡಿಯಾಗಿದೆ. ಅದನ್ನು ಮಾಡಬೇಕು ಅಂತ ಒಂದೊಂದು ಸಲ ಆಸೆ ಹುಟ್ಟುತ್ತೆ. ಆದರೆ ಇನ್ನೊಮ್ಮೆ ಆತಂಕವೂ ಆಗುತ್ತೆ. ಆದರೂ ಸದ್ಯದ ಮಟ್ಟಿಗೆ ನಾನು ನಿರ್ದೇಶಿಸುವುದಿದ್ದರೆ ಆ ಚಿತ್ರವನ್ನು ಮಾತ್ರ. ನಿರ್ಮಾಣವೂ ನನ್ನದೇ" ಎಂದಿದ್ದಾರೆ.
ಉಪ್ಪಿ ಹೀಗೆಂದು ಹೇಳಿರುವುದು ತನ್ನ 'ಉಪೇಂದ್ರ-II'ರ ಬಗ್ಗೆ. ಈ ಹಿಂದೆ ಟ್ವಿಟ್ಟರಿನಲ್ಲಿ ಈ ವಿಚಾರವನ್ನು ರಿಯಲ್ ಸ್ಟಾರ್ ಬಹಿರಂಗಪಡಿಸಿದ್ದರು. 'ಸೂಪರ್-II'ರ ಸಿದ್ಧತೆಯಲ್ಲಿರುವ ವದಂತಿಗಳನ್ನೂ ಇದೇ ಸಂದರ್ಭದಲ್ಲಿ ಅವರು ತಳ್ಳಿ ಹಾಕಿದ್ದರು.
ಈ ನಡುವೆ ಉಪ್ಪಿ ನಾಯಕನಾಗಿರುವ ಪಿ. ವಾಸು ನಿರ್ದೇಶನದ 'ಆರಕ್ಷಕ' ವಿಮರ್ಶಕರಿಂದ ಬೆನ್ನು ತಟ್ಟಿಸಿಕೊಂಡಿರುವುದರ ಜತೆಗೆ ಪ್ರೇಕ್ಷಕರ ಪ್ರೀತಿಯನ್ನೂ ಗಳಿಸಿದೆ. ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

No comments:
Post a Comment