ಸೂಪರ್ ಸ್ಟಾರ್ ಉಪೇಂದ್ರ ಫುಲ್ ಖುಷಿಯಾಗಿದ್ದಾರೆ. ಕಾರಣ ಪ್ರೀಮಿಯರ್ ಶೋನಲ್ಲಿ ಆರಕ್ಷಕ ವೀಕ್ಷಿಸಿದ ಉಪ್ಪಿಯ ತಂದೆ-ತಾಯಿ "ಚಿತ್ರ ತುಂಬಾ ಚೆನ್ನಾಗಿದೆ, ಖಂಡಿತ ದೊಡ್ಡ ಹಿಟ್ ಆಗುತ್ತೆ" ಅಂದಿದ್ದಾರೆ. "ಇದು ನನಗೆ ಆತ್ಮವಿಶ್ವಾಸದ ಜೊತೆಗೆ ಆಶೀರ್ವಾದವೂ ಆಗಿದೆ" ಅಂದಿದ್ದಾರೆ ಉಪ್ಪಿ. ಈ ಮಾತಿನಿಂದ ಅವರ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳುವುದು ಖಂಡಿತ.
ಜೊತೆಗೆ ಉಪ್ಪಿ ತಾಯಿಗೆ ರಾಗಿಣಿಯ 'ಅಂಡರ್ ವಾಟರ್ ಸಾಂಗ್' ತುಂಬಾ ಇಷ್ಟವಾಗಿದೆಯಂತೆ. ಇದು ರಾಗಿಣಿ ಸಖತ್ ಖುಷಿಗೆ ಕಾರಣ. ಉಪೇಂದ್ರ ಜೊತೆ ಇದೇ ಮೊದಲ ಬಾರಿಗೆ ಅಭಿನಯಿಸಿರುವ ರಾಗಿಣಿಗೆ ಸೂಪರ್ ಸ್ಟಾರ್ ಜೊತೆ ನಟಿಸಿದ್ದು ವಿಶ್ವಾಸ ಮೂಡಿಸಿದೆಯಂತೆ. ಜೊತೆಗೆ ಉಪ್ಪಿ ತಾಯಿಯ ಕಾಂಪ್ಲಿಮೆಂಟ್ ಬೇರೆ ಆಕೆಗಿದೆ.
ಉಪೇಂದ್ರ ತಂದೆಗೆ 13 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಎ' ಚಿತ್ರ ಇನ್ನೂ ಅರ್ಥವಾಗಿಲ್ಲವಂತೆ. "ಅದು ಹೇಗೆ ಅಷ್ಟು ದೊಡ್ಡ ಹಿಟ್ ಆಗಿ ದಾಖಲೆ ಬರೆಯಿತು" ಎಂದು ಈಗಲೂ ಆಗಾಗ ಕೇಳುತ್ತಿರುತ್ತಾರಂತೆ. ಆದರೆ ಆರಕ್ಷಕ ಅರ್ಥವಾಗಿದೆ, ಸಿನಿಮಾ ತುಂಬಾ ಚೆನ್ನಾಗಿದೆ, ಓಡುತ್ತದೆ ಎಂದಿರುವುದು ಸ್ವತಃ ಉಪ್ಪಿ ನಿರೀಕ್ಷೆ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ.

No comments:
Post a Comment