ಇನ್ನೇನು ಇದೇ ವಾರ ಬಿಡುಗಡೆಯಾಗಲಿರುವ 'ಆರಕ್ಷಕ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ಮಾನಸಿಕ ರೋಗಿಯ ಪಾತ್ರ ಹೇಗಿರುತ್ತದೆ? 'ಆಪ್ತಮಿತ್ರ'ದ ಸೌಂದರ್ಯಾರಂತೆ ಇಲ್ಲಿ ಉಪ್ಪಿಯೂ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾರಾ? ಅಥವಾ ಅದೇ 'ಆಪ್ತಮಿತ್ರ', 'ಆಪ್ತರಕ್ಷಕ'ದ ಛಾಯೆ ಇಲ್ಲಿರುತ್ತದೆಯೇ? ಇದು ಭಾರೀ ಕುತೂಹಲ ಕೆರಳಿಸಿರುವ ಪ್ರಶ್ನೆಗಳು.
ಉತ್ತರ ನೀಡಲು ನಿರ್ದೇಶಕ ಪಿ. ವಾಸು ಕೈಗೆ ಸಿಗುತ್ತಿಲ್ಲ. ಸಿಕ್ಕಿದರೂ ಅವರು ಹೆಚ್ಚು ಮಾತನಾಡುವ ಪಾರ್ಟಿ ಅಲ್ಲ. ಸುಮ್ಮನೆ ತಲೆಯಾಡಿಸಿ, ನೀವೇ ಊಹಿಸಿ ಅಂತ ಹೇಳಿ ಬಿಡುತ್ತಾರೆ. ಉಪ್ಪಿಯಂತೂ ಕಾಗೆ ಹಾರಿಸುವುದರಲ್ಲಿ ಎತ್ತಿದ ಕೈ. ಅವರಿಬ್ಬರ ಬಾಯಿಯಿಂದ ಬರುವ ಉತ್ತರ ಒಂದೇ ಒಂದು-- ಅದು ಈ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಅನ್ನೋದು ಮಾತ್ರ.
ಚಿತ್ರರಂಗದ ಮೂಲಗಳ ಪ್ರಕಾರ, ಉಪ್ಪಿ ಇಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ವ್ಯಾಪಾರಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ಸೆಂಟಿಮೆಂಟಿಗೂ ಪ್ರಾಧಾನ್ಯತೆ ನೀಡಲಾಗಿದೆ. ಉಪ್ಪಿ ಆಕ್ಷನ್ ದೃಶ್ಯಗಳಂತೂ ಸೂಪರ್ ಅಂತೆ. ಇದುವರೆಗೆ ಉಪ್ಪಿ ಇಂತಹ ಚಿತ್ರದಲ್ಲಿ ನಟಿಸಿಯೇ ಇಲ್ಲ, ಹಾಗಿದೆ ಚಿತ್ರ ಅಂತ ಹೇಳಲಾಗ್ತಿದೆ.
ಚಿತ್ರದ ಜಾಹೀರಾತುಗಳನ್ನು ನೋಡಿದರೆ, ಉಪ್ಪಿಯದ್ದು ಇಲ್ಲಿ ಪಕ್ಕಾ ಹುಚ್ಚನ ಪಾತ್ರ. ಇನ್ನೊಂದು ಪೊಲೀಸ್. ಎರಡು ಪಾತ್ರಗಳಲ್ಲಿ ಉಪ್ಪಿ ಸೇರಿಕೊಂಡಿದ್ದಾರೆ. ಅಂದರೆ ನಿಜಕ್ಕೂ ಎರಡು ಪಾತ್ರಗಳಿರುತ್ತವೆಯೇ ಅಥವಾ ಒಬ್ಬನೇ ವ್ಯಕ್ತಿ ಇಬ್ಬರಂತೆ ಇರುತ್ತಾನಾ? ಎರಡು ಪಾತ್ರಗಳು ಇರುವುದೇ ನಿಜವಾಗಿದ್ದಲ್ಲಿ, ಅದೇ ಹಳೆ ಅವಳಿ-ಜವಳಿ ಅಡುಗೂಲಜ್ಜಿ ಕಥೆ ಇಲ್ಲೂ ಇದೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಇದೇ ಶುಕ್ರವಾರ (ಜನವರಿ 26) ಉತ್ತರ ಸಿಗಲಿದೆ.
ಕನ್ನಡದಲ್ಲಿ ಆಪ್ತಮಿತ್ರ, ಆಪ್ತರಕ್ಷಕದ ನಂತರ ಪಿ. ವಾಸು ನಿರ್ದೇಶಿಸುತ್ತಿರುವ (ಈ ಮೂರು ಚಿತ್ರಗಳಿಗಿಂತ ಮೊದಲು ಕನ್ನಡದಲ್ಲಿ ವಾಸು ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ) ಮೂರನೇ ಚಿತ್ರವಿದು. ಮೊದಲು ಹೇಳಿದ ಎರಡೂ ಚಿತ್ರಗಳು ಸೂಪರ್ ಹಿಟ್. ಇದೇ ಸಾಲಿನಲ್ಲಿ ಬರುತ್ತಿರುವ ಮೂರನೇ ಚಿತ್ರ ತೀವ್ರ ಕುತೂಹಲ ಕೆರಳಿಸಿದೆ.
ಉಪ್ಪಿಯಂತೂ 'ಸೂಪರ್' ನಂತರ ಸಾಲು ಸಾಲಾಗಿ ನಟಿಸುತ್ತಿದ್ದಾರೆ. ಈ ನಡುವೆ ಬಂದ ಅವರ 'ಶ್ರೀಮತಿ' ಶಾಂತಿಯುತವಾಗಿ ಚಿತ್ರಮಂದಿರಗಳಿಂದ ನಿರ್ಗಮಿಸಿತ್ತು. ಅಭಿಮಾನಿಗಳಂತೂ ಉಪ್ಪಿಯ ಚಿತ್ರಗಳಿಗಾಗಿ ಕಾಯುತ್ತಿದ್ದಾರೆ. 'ಆರಕ್ಷಕ' ಚಿತ್ರದ 'ಥೂ ನನ್ ಮಕ್ಳಾ' ಹಾಡು ಎಲ್ಲೆಡೆ ಹುಚ್ಚೆಬ್ಬಿಸಿದೆ. ಚಿತ್ರದ ಪೋಸ್ಟರುಗಳು ತುದಿಗಾಲಲ್ಲಿ ನಿಲ್ಲಿಸಿವೆ.
ಉಪ್ಪಿಗೆ ಇಲ್ಲಿ ಇಬ್ಬಿಬ್ಬರು ನಾಯಕಿಯರು. ಒಬ್ಬಾಕೆ ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ. ಸದಾ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಉಪ್ಪಿ ಜತೆ ನಟಿಸುತ್ತಿರುವುದು ಇದೇ ಮೊದಲು. ನಿರ್ಮಾಪಕರು ಕೃಷ್ಣ ಪ್ರಜ್ವಲ್. ಸಂಗೀತ ನಿರ್ದೇಶಕ ಗುರುಕಿರಣ್ ಹೊರತುಪಡಿಸಿದರೆ, ಬಹುತೇಕ ಚಿತ್ರತಂಡವೇ ಉಪ್ಪಿಯ ಪಾಲಿಗೆ ಹೊಸತು. ಹಾಗಾಗಿ ಬೇರೇನಾದರೂ ನಿರೀಕ್ಷಿಸಿದರೆ ತಪ್ಪಾಗಲಾರದು. ಏನಂತೀರಾ?

No comments:
Post a Comment