ರಿಯಲ್ ಸ್ಟಾರ್ ಉಪೇಂದ್ರ ಮತ್ತು ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ಚಿತ್ರಕ್ಕೆ ಕೋಟಿಗಟ್ಟಲೆ ಬಜೆಟ್ ಸುರಿಯಲಾಗುತ್ತಿದೆ. ಮುನಿರತ್ನ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುರೇಶ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು 'ಕಠಾರಿ ವೀರ ಸುರಸುಂದರಾಂಗಿ'.
ಈ ಚಿತ್ರವನ್ನು ತೆಲುಗು, ತಮಿಳು ಭಾಷೆಗಳಿಗೂ ಡಬ್ ಮಾಡಲಾಗುತ್ತದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರವನ್ನು ಸಂಪೂರ್ಣ 3D ತಂತ್ರಜ್ಞಾನದಲ್ಲಿ ತೆರೆಗೆ ತರಲಾಗುತ್ತಿದೆ. ಇಂದ್ರಲೋಕದ ಅದ್ದೂರಿ ಸೆಟ್‍ನ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ.
ಎಚ್ ಸಿ ವೇಣು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರಕ್ಕೆ ಈ ಹಿಂದೆ 'ಯಮೇಂದ್ರ ಉಪೇಂದ್ರ' ಎಂದು ಹೆಸರಿಡಲಾಗಿತ್ತು. ಡಿಸೆಂಬರ್ 6ರಿಂದ ಯಮಲೋಕದ ವಿಶೇಷ ಸೆಟ್ ಹಾಕಿ ರಾಮೋಜಿ ಫಿಲಂಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ರೆಬೆಲ್ ಸ್ಟಾರ್ ಅಂಬರೀಷ್ ಯಮನಾಗಿ ದೊಡ್ಡಣ್ಣ ಚಿತ್ರಗುಪ್ತನಾಗಿ ಪಾತ್ರವನ್ನು ಪೋಷಿಸಿದ್ದಾರೆ.

No comments:
Post a Comment