Wednesday, 12 October 2011

ಯಮೇಂದ್ರ ಉಪೇಂದ್ರರಾಗಿ ರೆಬೆಲ್ ಸ್ಟಾರ್ ಜೊತೆ ಉಪ್ಪಿ


ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ 'ತಂದೆಗೆ ತಕ್ಕ ಮಗ' ಚಿತ್ರದಲ್ಲಿ ಅಂಬಿ ಜೊತೆ ಉಪ್ಪಿ ಅಭಿನಯಿಸಿದ್ದರು. ಈಗ ಮುನಿರತ್ನ ನಿರ್ಮಿಸುತ್ತಿರುವ ಸಾಧು ಕೋಕಿಲ ನಿರ್ದೇಶಿಸಲಿರುವ ಇನ್ನೂ ಹೆಸರಿಡ ಚಿತ್ರದಲ್ಲಿ ಇಬ್ಬರೂ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ನವೆಂಬರ್ ಮಧ್ಯಂತರದಲ್ಲಿ ಚಿತ್ರ ಸೆಟ್ಟೇರಲಿದೆ. ಮುನಿರತ್ನ ಅವರೇ ಸ್ವತಃ ಚಿತ್ರಕತೆ ಹೆಣೆದಿದ್ದು ಚಿತ್ರದಲ್ಲಿ ಅಂಬಿ ಅವರು ಪ್ರಮುಖ ಪಾತ್ರ ಪೋಷಿಸಲಿದ್ದಾರೆ. ಉಪೇಂದ್ರ ಅವರದು ನ್ಯಾಯಕ್ಕಾಗಿ ಹೋರಾಡುವ ಬಿಸಿರಕ್ತದ ಪಾತ್ರ. ನ್ಯಾಯಕ್ಕಾಗಿ ಯಮಧರ್ಮನೊಂದಿಗೂ ಹೋರಾಡುತ್ತಾನೆ.

ಗಾಂಧಿನಗರದ ಸುದ್ದೀಶ್ವರರ ಪ್ರಕಾರ ಚಿತ್ರಕ್ಕೆ 'ಯಮೇಂಧ್ರ ಉಪೇಂದ್ರ' ಎಂದು ಹೆಸರಿಡಲಾಗಿದೆ. ಆದರೆ ಈ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಇಲ್ಲಿ ಯಮೇಂದ್ರ ಯಾರು ಉಪೇಂದ್ರ ಎಂಬುದು ನಿಮಗಿಷ್ಟೊತ್ತಿಗೆ ಹೊಳೆದೇ ಇರುತ್ತದೆ. ಚಿತ್ರದ ನಾಯಕಿ ಯಾರು ಗೊತ್ತ್ತೆ? ಗೋಲ್ಡನ್ ಗರ್ಲ್ ರಮ್ಯಾ.

ಈ ಚಿತ್ರದಲ್ಲೂ ಸಾಧು ಕೋಕಿಲ ಅವರದು ಬಹುಮುಖ ಜವಾಬ್ದಾರಿಗಳು. ಚಿತ್ರ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶಕರಾಗಿಯೂ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಪಕ್ಕಾ ಕಾಮಿಡಿ ಚಿತ್ರವಾದ ಇದರಲ್ಲಿ ಸಾಕಷ್ಟು ಕಮರ್ಷಿಯಲ್ ಎಲಿಮೆಂಟ್ಸ್ ಇವೆಯಂತೆ.

No comments:

Post a Comment