Monday, 30 May 2011

ಗಾಡ್ ಫಾದರ್ ಹಾಡಿಗೆ ರೆಹಮಾನ್ ಜೈಹೋ ಅಂದ್ರು



ಬೆಂಗಳೂರು, ಮೇ 29: ಗಾಡ್ ಫಾದರ್ ಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತ 

ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಜೈಹೋ ಎಂದಿದ್ದಾರೆ. 

ಕನ್ನಡದ ಪ್ರಪ್ರಥಮ ಚಿತ್ರವೊಂದಕ್ಕೆ ಸಂಗೀತ ನೀಡುವುದನ್ನು ಸ್ವತಃ 

ಅವರೇ ಖಚಿತ ಪಡಿಸಿದ್ದಾರೆ.ನಿನ್ನೆ ಅಪರಾಹ್ನ ಗಾರ್ಡೇನಿಯಾ 

ರೆಸಾರ್ಟ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ರೆಹಮಾನ್ 

ಇದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಗಾಡ್ ಫಾದರ್ 

ಸಿನಿಮಾದ ನಿರ್ಮಾಪಕ ಕೆ. ಮಂಜು ಜನಪ್ರಿಯ ಸಂಗೀತ 

ನಿರ್ದೇಶಕನಿಗೆ ಹೂವಿನ ಬೊಕೆಯೊಂದನ್ನು ನೀಡುವ ಮೂಲಕ 

ಕನ್ನಡ ಸಿನಿಮಾಕ್ಕೆ ಔಪಚಾರಿಕವಾಗಿ ಸ್ವಾಗತಿಸಿದರು. 

ಗಾಡ್ ಫಾದರ್ ಚಿತ್ರದಲ್ಲಿ ಉಪೇಂದ್ರ ತ್ರಿಬಲ್ ಆಕ್ಟ್ ನಲ್ಲಿ 

ಮಿಂಚಲಿದ್ದಾರೆ. ಹೀರೋಯಿನ್ ಗಳಾಗಿ ಸೌಂದರ್ಯ 

ಜಯಮಾಲಾ ಮತ್ತು ಕ್ಯಾಥರಿನ್ ಇದ್ದಾರೆ. ಛಾಯಾಗ್ರಾಹಕ 

ಪಿ ಸಿ ಶ್ರೀರಾಮ್ ಆಕ್ಷನ್, ಕಟ್ ಹೇಳುವ ಮೂಲಕ ಇಲ್ಲಿ ನಿರ್ದೇಶಕರಾಗಿದ್ದಾರೆ. 

ತಮಿಳಿನ ಯಶಸ್ವಿ ಚಿತ್ರ 'ವರಲಾರು'

 ಚಿತ್ರದ ರೀಮೇಕ್ 'ಗಾಡ್ ಫಾದರ್'. ಮೂಲ ಚಿತ್ರವನ್ನು ಕೆ ಎಸ್ ರವಿಕುಮಾರ್ 

ನಿರ್ದೇಶಿಸಿದ್ದರು. ಮೂಲ ಚಿತ್ರಕ್ಕೂ ರೆಹಮಾನ್ ಅವರೇ ಸಂಗೀತ ಸಂಯೋಜಿಸಿದ್ದರು. 

ಈಗ ಕನ್ನಡದ ಅವತರಣಿಕೆಗೂ ರೆಹಮಾನ್ ಅವರೇ ಸಂಗೀತ ನಿರ್ದೇಶಿಸಲಿದ್ದಾರೆ. 


No comments:

Post a Comment