Thursday 3 May, 2012

ಕಠಾರಿವೀರಕ್ಕೆ ಡಾ ವಿಷ್ಣು ಆಶೀರ್ವಾದವಿದೆ: ಮುನಿರತ್ನ


ಕನ್ನಡ ಚಿತ್ರರಂಗವನ್ನು ಆಳಿದ ಮಹಾನುಭಾವರಲ್ಲಿ ಡಾ ರಾಜ್ ಕುಮಾರ್, ಶಂಕರ್ ನಾಗ್ ಹಾಗೂ ಡಾ ವಿಷ್ಣುವರ್ಧನ್ ಅವರ ಹೆಸರುಗಳು ಚಿರಪರಿಚಿತ ಹಾಗೂ ಅಜರಾಮರ. ಅವರ ಹೆಸರುಗಳನ್ನು ಎನ್ ಕ್ಯಾಶ್ ಮಾಡಿಕೊಂಡು ಇಂದು ವ್ಯವಹಾರ ನಡೆಸುವ ಅದೆಷ್ಟೋ ನಿರ್ಮಾಪಕರು ಹಾಗೂ ಚಿತ್ರತಂಡವಿದೆ. ಇದೀಗ ಅದಕ್ಕೆ ತಾಜಾ ಉದಾಹರಣೆ ಆಗಲಿರುವುದು ಮುನಿರತ್ನ ಹಾಗೂ ಉಪೇಂದ್ರರ ಕಠಾರಿವೀರ ಸುರಸುಂದರಾಂಗಿ.

ಮುನಿರತ್ನ ಅವರ 'ಟಿವಿ 9' ಸಂದರ್ಶನದಲ್ಲಿ "ನನ್ನ ನಿರ್ಮಾಣದ ಒಂದು ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ನಟಿಸಬೇಕಾಗಿತ್ತು. ಅದಕ್ಕಾಗಿ ನಾನು ಅವರಿಗೆ ಚೆಕ್ ಬುಕ್ ನೀಡಿ, ಹಣವನ್ನು ಬರೆದುಕೊಳ್ಳಲು ಹೇಳಿದ್ದೆ. ಆಗ ಅವರು 6 ಲಕ್ಷವನ್ನು ಪ್ರತಿ ಚೆಕ್ಕುಗಳಲ್ಲಿ ಬರೆದುಕೊಂಡಿದ್ದರು. ಅದರೆ ಆಪ್ತರಕ್ಷಕ ಚಿತ್ರೀಕರಣದ ವೇಳೆ, ಕುದುರೆಯಿಂದ ಬಿದ್ದು ಗಾಯಮಾಡಿಕೊಂಡ ನಂತರ ಅದನ್ನು ಭಾರತಿಯವರಿಗೆ ನನಗೆ ಮರಳಿಸುವಂತೆ ಹೇಳಿದ್ದರಂತೆ. 

ಅದರಂತೆ ವಿಷ್ಣು ಸರ್ ತೀರಿಕೊಂಡ ನಂತರ ಭಾರತಿ ವಿಷ್ಣುವರ್ಧನ್ ಅವರು ಒಂದು ದಿನ ನನ್ನನ್ನು ಕರೆದು ವಿಷಯ ಹೇಳಿ ಚೆಕ್ಕನ್ನು ವಾಪಸ್ ನೀಡಿದರು. ನನಗೆ ಅದನ್ನು ತೆಗೆದುಕೊಂಡರೂ ಇಟ್ಟುಕೊಳ್ಳಲು ಮನಸ್ಸಾಗದೇ ಸೀದಾ ಉಪೇಂದ್ರರ ಮನೆಗೆ ಹೋಗಿ ಅಷ್ಟು ಹಣವನ್ನು ಅವರಿಗೆ ನೀಡಿ ಕಠಾರಿವೀರಕ್ಕಾಗಿ ಅವರ ಕಾಲ್ ಶೀಟ್ ತೆಗೆದುಕೊಂಡು ಬಂದೆ. ಹಾಗಾಗಿ ಡಾ ವಿಷ್ಟು ಅವರ ಆಶೀರ್ವಾದ ನಮ್ಮ ಕಠಾರಿವೀರ ಚಿತ್ರಕ್ಕಿದೆ" ಎಂದಿದ್ದಾರೆ.

No comments:

Post a Comment