Friday 27 April, 2012

ಮುನಿರತ್ನ 'ಕಠಾರಿವೀರ' ಬಿಡುಗಡೆ ಹಾದಿ ಸುಗಮ


ಯಶವಂತಪುರ (ವಾರ್ಡ್ ನಂಬರ್ 37) ಹಾಲಿ ಕಾರ್ಪೋರೇಟರ್ ಮುನಿರತ್ನ ನಿರ್ಮಾಣದ ' ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಿಡುಗಡೆ ಹಾದಿ ಸುಗಮವಾಗಿದೆ. ಭಾರಿ ಬಜೆಟ್‌ನ ಈ ಚಿತ್ರ 2ಡಿ ಹಾಗೂ 3ಡಿ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದ್ದು ಎರಡೂ ಆವೃತ್ತಿಗಳೂ ಸೆನ್ಸಾರ್‌ನಲ್ಲಿ ಪಾಸಾಗಿವೆ. 

'ಕಠಾರಿವೀರ' ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ 2ಡಿ ಮತ್ತು 3ಡಿ ಆವೃತ್ತಿಗಳಿಗೆ ಯು/ಎ ಸರ್ಟಿಫಿಕೇಟ್ ನೀಡಿದೆ. 'ಕಠಾರಿವೀರ' 2ಡಿ ಚಿತ್ರಕ್ಕೆ ಬುಧವಾರ (ಏ.25) ಸೆನ್ಸಾರ್ ಆಗಿತ್ತು. 3ಡಿ ಚಿತ್ರವನ್ನು ಗುರುವಾರ (ಏ.27) ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. 

ಆದರೆ ಕೆ ಮಂಜು ಅವರ 'ಗಾಡ್‌ಫಾದರ್' ಚಿತ್ರದ ಸೆನ್ಸಾರ್ ಕತೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಮೊದಲು ಯಾವ ಚಿತ್ರ ಸೆನ್ಸಾರ್ ಆಗುತ್ತದೋ ಆ ಚಿತ್ರಕ್ಕೆ ಮೊದಲು ಬಿಡುಗಡೆ ಭಾಗ್ಯ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿಗೆ ಕೆ ಮಂಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 

ಮೊದಲು ಸೆಟ್ಟೇರಿದ್ದು ತಮ್ಮ 'ಗಾಡ್‌ಫಾದರ್' ಚಿತ್ರ. ಹಾಗಾಗಿ ತಮ್ಮ ಚಿತ್ರವೇ ಮೊದಲು ಬಿಡುಗಡೆಯಾಗಬೇಕು ಎಂದು ಪಟ್ಟುಹಿಡಿದ್ದಾರೆ. ಆದಕಾರಣ ಎರಡೂ ಚಿತ್ರಗಳ ಬಿಡುಗಡೆ ವಿವಾದ ತಾರಕಕ್ಕೇರಿದೆ. ಈ ಸಂಬಂಧ ಶುಕ್ರವಾರ (ಏ.27) ಸಂಜೆ ಫಿಲಂ ಚೇಂಬರ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಏನಾಗಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. 

No comments:

Post a Comment