Tuesday 29 November, 2011

Upendra & Saikumar together in the movie "Kalpana"-exclusive


ಇದುವರೆಗೆ ಪೊಲೀಸ್ ಪಾತ್ರಗಳಲ್ಲೇ ಗಟ್ಟಿತನ ತೋರಿಸಿದ್ದ ಡೈಲಾಗ್ ಕಿಂಗ್ ಸಾಯಿಕುಮಾರ್ ಮಡಿಲಿಗೆ ಅದ್ಭುತ ನಟನೆಗೆ ಅವಕಾಶವಿರುವ ಪಾತ್ರವೊಂದು ಬಿದ್ದಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ 'ಕಲ್ಪನಾ' ಹಾರರ್ ಚಿತ್ರದಲ್ಲಿ ಅವರು ಮ೦ಗಳಮುಖಿ ಪಾತ್ರ ಮಾಡಲಿದ್ದಾರೆ.

ರಾಘವ ಲಾರೆನ್ಸ್ ನಿರ್ದೇಶಿಸಿ-ನಟಿಸಿದ್ದ 'ಕಾಂಚನಾ' ಕನ್ನಡದಲ್ಲಿ ನಿರ್ಮಾಣವಾಗುತ್ತಿರುವುದು ಗೊತ್ತೇ ಇದೆ. ಅಲ್ಲಿ ನಾಯಕಿಯಾಗಿದ್ದ ಕನ್ನಡದ ಹುಡುಗಿ ಲಕ್ಷ್ಮಿ ರೈಯನ್ನೇ ಇಲ್ಲೂ ಕರೆಸಲಾಗಿದೆ. ಆದರೆ ಶೀರ್ಷಿಕೆಯ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದ ಶರತ್ ಕುಮಾರ್ ಬದಲಿಗೆ ಇಲ್ಲಿ ಸಾಯಿ ಕುಮಾರ್ ಅವರನ್ನು ಆರಿಸಲಾಗಿದೆ.

ಕಾಂಚನಾ ತಮಿಳು-ತೆಲುಗಿನಲ್ಲಿ ಜಯಭೇರಿ ಬಾರಿಸಿತ್ತು. ನಪುಂಸಕ ಸ್ತ್ರೀಯ ಪಾತ್ರದಲ್ಲಿ ಶರತ್ ಕುಮಾರ್ ನಟನೆಯಂತೂ ಭಾರೀ ಪ್ರಶಂಸೆಗೆ ಕಾರಣವಾಗಿತ್ತು. ಆ ಪಾತ್ರವನ್ನು ಸಾಯಿ ಕುಮಾರ್ ಹೇಗೆ ನಿರ್ವಹಿಸಲಿದ್ದಾರೆ ಅನ್ನುವುದನ್ನು ಕಾದು ನೋಡಬೇಕು.

ರಾಮ್ ನಾರಾಯಣ್ ನಿರ್ದೇಶಿಸಲಿರುವ ಚಿತ್ರದಲ್ಲಿ ನಟಿಸುವ ಒಪ್ಪಂದಕ್ಕೆ ಸಾಯಿ ಕುಮಾರ್ ಈಗಾಗಲೇ ಸಹಿ ಹಾಕಿದ್ದಾರೆ. ಡಿಸೆಂಬರ್ 14ರಂದು ಚಿತ್ರದ ಮುಹೂರ್ತ ನಡೆಯಲಿದೆ.

ಈ ನಡುವೆ ಕಾಂಚನಾ ಚಿತ್ರ ಬಾಲಿವುಡ್‌ನಲ್ಲೂ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಲ್ಮಾನ್ ಖಾನ್ ನಾಯಕರಾಗಲಿದ್ದಾರೆ ಎಂದು ಹೇಳಲಾಗಿದ್ದ ಜಾಗಕ್ಕೀಗ ಶಾರೂಖ್ ಖಾನ್ ಬಂದಿದ್ದಾರೆ. ಶರತ್ ಕುಮಾರ್ ಪಾತ್ರ ಸಂಜಯ್ ದತ್ ಮಡಿಲಿಗೆ ಬಿದ್ದಿದೆ. ಭಾರೀ ಮೊತ್ತ ನೀಡಿರುವ ಸಹರಾ ವನ್ ಮೋಶನ್ ಪಿಕ್ಚರ್ಸ್ ಈ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸುತ್ತಿದೆ.

ಹಿಂದಿಯಲ್ಲಿ ಸ್ವತಃ ಲಾರೆನ್ಸ್ ನಿರ್ದೇಶನ ಮಾಡುವ ಸಾಧ್ಯತೆಗಳಿವೆ. ನಾಯಕಿ ಸೇರಿದಂತೆ ಇತರ ಪಾತ್ರಗಳ ಆಯ್ಕೆ, ಶೀರ್ಷಿಕೆ ಶೀಘ್ರದಲ್ಲೇ ಹೊರ ಬೀಳಲಿದೆ.



Dialogue King Sai Kumar is all set to act in an important role in the film Kalpana produced and directed by by Ram Narayan.   The film is a remake of  Telugu  film Kanchana which was also been made in Tamil with the same title.
Upendra has already agreed to play the lead role in the film which was done by dance director Lawrence Raghavendra who also directed the film. Kannada girl Lakshmi Rai who has been busy working in Tamil films has been selected to play the lead role in ths film being paired up with Upendra.
The film is launching on December 14.


1 comment: